ನವದೆಹಲಿ (ಪಿಟಿಐ): ವಾಹನಗಳ ದೃಢತೆಯನ್ನು ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ (ಎಟಿಎಸ್) ಮೂಲಕ ಪರೀಕ್ಷಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರವು ಹಂತ ಹಂತವಾಗಿ ಕಡ್ಡಾಯ ಮಾಡಲಿದ್ದು, ಮೊದಲ ಹಂತವು ಮುಂದಿನ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರಲಿದೆ.
ಟ್ರಕ್‌ಗಳು ಮತ್ತು ಬಸ್ಸುಗಳ ದೃಢತೆಯನ್ನು ಎಟಿಎಸ್ ಮೂಲಕ ಪರೀಕ್ಷಿಸುವುದು 2023ರ ಏಪ್ರಿಲ್ 1ರಿಂದ ಕಡ್ಡಾಯವಾಗಲಿದೆ. ಮಧ್ಯಮ ಗಾತ್ರದ ಸರಕು ಸಾಗಣೆ ವಾಹನ, ಮಧ್ಯಮ ಗಾತ್ರದ ಪ್ರಯಾಣಿಕ ವಾಹನ (ಮಿನಿ ಬಸ್) ಮತ್ತು ಲಘು ಮೋಟಾರು ವಾಹನಗಳು (ಟ್ಯಾಕ್ಸಿ, ಕ್ಯಾಬ್) 2024ರ ಜೂನ್ 1ರಿಂದ ಎಟಿಎಸ್ ಮೂಲಕ ದೃಢತೆ ಪರೀಕ್ಷಿಸಿಕೊಳ್ಳುವುದು ಕಡ್ಡಾಯವಾಗಲಿದೆ.
ವೈಯಕ್ತಿಕ ಬಳಕೆಯ ವಾಹನಗಳ ದೃಢತೆಯನ್ನು ಅವುಗಳಿಗೆ ಹದಿನೈದು ವರ್ಷ ಪೂರ್ಣಗೊಂಡ ನಂತರದಲ್ಲಿ ದೃಢತೆ ಪ್ರಮಾಣಪತ್ರ ನವೀಕರಿಸುವ ಸಂದರ್ಭದಲ್ಲಿ ಎಟಿಎಸ್ ಮೂಲಕ ಪರೀಕ್ಷಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.