ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟಾರ್ಸ್, ತನ್ನ ವಾಹನಗಳ ಬೆಲೆಯನ್ನು ಶೇ 2 ರಷ್ಟು ಏರಿಕೆ ಮಾಡುವುದಾಗಿ ಹೇಳಿದೆ.
ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಹೊಗೆ ಹೊರಸೂಸುವಿಕೆ ಮಾನದಂದ ಅಳವಡಿಸುವ ಸಲುವಾಗಿ ಈ ಏರಿಕೆ ಮಾಡಲಾಗಿದೆ ಎಂದು ಹೀರೋ ಹೇಳಿದೆ.
ಆಯ್ದ ಮಾಡೆಲ್‌ಗಳ ಮೇಲೆ ಬೆಲೆ ಏರಿಕೆ ಮಾಡಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರ ಜಾರಿಗೆ ಬರಲಿದೆ.
ಸುಮಾರು ಶೇ 2ರ ವರೆಗೆ ಬೆಲೆ ಏರಿಕೆ ಮಾಡಲಾಗಿದ್ದು, ವಿವಿಧ ಮಾದರಿಯ ವಾಹನಗಳ ಮೇಲೆ ಇದು ವ್ಯತ್ಯಾಸವಾಗಲಿದೆ ಎಂದು ಹೀರೋ ಪ್ರಕಟಣೆಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.