ADVERTISEMENT

5ನೇ ಪೀಳಿಗೆಯ ಹೋಂಡಾ ಸಿಟಿ ಕಾರು ತಯಾರಿಕೆ ಆರಂಭ: ಜುಲೈನಲ್ಲಿ ರಸ್ತೆಗೆ

ಪಿಟಿಐ
Published 23 ಜೂನ್ 2020, 12:15 IST
Last Updated 23 ಜೂನ್ 2020, 12:15 IST
5ನೇ ಪೀಳಿಗೆಯ ಹೋಂಡಾ ಸಿಟಿ ಕಾರು
5ನೇ ಪೀಳಿಗೆಯ ಹೋಂಡಾ ಸಿಟಿ ಕಾರು    

ನವದೆಹಲಿ: 5ನೇ ಪೀಳಿಗೆಯ ಹೋಂಡಾ ಸಿಟಿ ಮಾದರಿಯ ಕಾರ್‌ ತಯಾರಿಕೆ ಆರಂಭವಾಗಿದ್ದು, ಜುಲೈನಲ್ಲಿ ಬಿಡುಗಡೆ ಮಾಡುವುದಾಗಿ ಹೋಂಡಾ ಕಾರ್ಸ್‌ ಇಂಡಿಯಾ ತಿಳಿಸಿದೆ.

ಬಿಎಸ್‌6 ಮಾನದಂಡಕ್ಕೆ ಪೂರಕವಾಗಿ,1.5 ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಸಿಗಲಿವೆ.

ಉತ್ತರ ಪ್ರದೇಶದ ಗ್ರೇಟರ್‌ ನೊಯಿಡಾ ಘಟಕದಲ್ಲಿ ಈ ಕಾರ್‌ ತಯಾರಾಗುತ್ತಿವೆ. ಕೋವಿಡ್‌–19 ಅನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಳಿಸಿದೆ.

ADVERTISEMENT

‘ಮಾರುಕಟ್ಟೆ ಸವಾಲುಗಳು ಹಲವಿದ್ದರೂ ಬಿಡುಗಡೆಗೂ ಮುನ್ನವೇ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ಕಂಪನಿಯ ಉಪಾಧ್ಯಕ್ಷ ರಾಜೇಶ್‌ ಗೋಯಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.