ADVERTISEMENT

₹30 ಸಾವಿರದವರೆಗೆ ಬೆಲೆ ಏರಿಕೆಗೆ ಹೋಂಡಾ ಕಾರ್ಸ್‌ ನಿರ್ಧಾರ

ಪಿಟಿಐ
Published 16 ಡಿಸೆಂಬರ್ 2022, 11:10 IST
Last Updated 16 ಡಿಸೆಂಬರ್ 2022, 11:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜನವರಿ 23ರಿಂದ ಜಾರಿಗೆ ಬರುವಂತೆ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಬೆಲೆ ಏರಿಕೆಯು ಗರಿಷ್ಠ ₹30 ಸಾವಿರದವರೆಗೆ ಇರಲಿದ್ದು, ಮಾದರಿಯಿಂದ ಮಾದರಿಗೆ ವ್ಯತ್ಯಾಸ ಆಗಲಿದೆ ಎಂದು ಅದು ಶುಕ್ರವಾರ ಹೇಳಿದೆ.

ಕಚ್ಚಾ ಸಾಮಗ್ರಿಗಳ ದರವು ನಿರಂತರವಾಗಿ ಹೆಚ್ಚಾಗುತ್ತಿರುವುದು ಹಾಗೂ ಹೊಸ ಮಾನದಂಡಗಳಿಗೆ ಅನುಗುಣವಾಗಿ ವಾಹನಗಳ ಬೆಲೆಯನ್ನು ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾದ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಕುನಾಲ್‌ ಬೆಹ್ಲಾ ತಿಳಿಸಿದ್ದಾರೆ.

ಮಾರುತಿ ಸುಜುಕಿ, ಟಾಟಾ ಮೋಟರ್ಸ್‌, ಹುಂಡೈ, ಮರ್ಸಿಡಿಸ್‌ ಬೆಂಜ್‌ ಸೇರಿದಂತೆ ಪ್ರಮುಖ ಎಲ್ಲಾ ಕಂಪನಿಗಳು ಸಹ ಜನವರಿಯಿಂದ ವಾಹನಗಳ ಬೆಲೆ ಏರಿಕೆ ಮಾಡುವ ನಿರ್ಧಾರಕ್ಕೆ ಬಂದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.