ADVERTISEMENT

ವಾರಂಟಿ, ಉಚಿತ ಸೇವಾ ಅವಧಿ ವಿಸ್ತರಿಸಿದ ಹುಂಡೈ, ರೆನೊ

​ಪ್ರಜಾವಾಣಿ ವಾರ್ತೆ
Published 15 ಮೇ 2021, 14:36 IST
Last Updated 15 ಮೇ 2021, 14:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹುಂಡೈ ಮತ್ತು ರೆನೊ ಕಂಪನಿಗಳು ಸಹ ವಾಹನಗಳ ವಾರಂಟಿ, ಉಚಿತ ಸೇವೆಗಳ ಅವಧಿಯನ್ನು ವಿಸ್ತರಿಸಿವೆ.

ಲಾಕ್‌ಡೌನ್‌ ಇರುವ ನಗರಗಳು ಮತ್ತು ರಾಜ್ಯಗಳಲ್ಲಿನ ಗ್ರಾಹಕರಿಗೆ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಣೆ ಮಾಡಿರುವುದಾಗಿ ಹುಂಡೈ ಮೋಟರ್‌ ಇಂಡಿಯಾ ಕಂಪನಿ ಶನಿವಾರ ತಿಳಿಸಿದೆ.

ರೆನೊ ಕಂಪನಿಯು ಏಪ್ರಿಲ್‌ 1 ರಿಂದ ಮೇ 31ರವರೆಗಿನ ಅವಧಿಯಲ್ಲಿ ಮುಗಿಯಲಿರುವ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಿದೆ.

ADVERTISEMENT

ಟೊಯೋಟ ಕಿರ್ಲೋಸ್ಕರ್ ಮೋಟರ್, ಮಾರುತಿ ಸುಜುಕಿ ಇಂಡಿಯಾ, ಟಾಟಾ ಮೋಟರ್ಸ್‌ ಮತ್ತು ಎಂಜಿ ಮೋಟರ್‌ ಇಂಡಿಯಾ ಕಂಪನಿಗಳು ಎಕ್ಸ್‌ಟೆಂಡೆಡ್‌ ವಾರಂಟಿ ಮತ್ತು ಉಚಿತ ಸೇವೆಗಳ ಅವಧಿಯನ್ನು ಒಂದು ತಿಂಗಳವರೆಗೆ ವಿಸ್ತರಣೆ ಮಾಡಿ ಈಗಾಗಲೇ ಪ್ರಕಟಣೆ ಹೊರಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.