ನವದೆಹಲಿ: ಏಪ್ರಿಲ್‌ನಲ್ಲಿ ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ 5 ರಷ್ಟು ಕುಸಿತ ಕಂಡು ಬಂದಿದೆ.
ಈ ಬಗ್ಗೆ ಭಾನುವಾರ ಪ್ರಕಟಣೆ ನೀಡಿರುವ ಹುಂಡೈ, ಕಳೆದ ಏಪ್ರಿಲ್‌ನಲ್ಲಿ 56,201 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷ ಇದೇ ಏಪ್ರಿಲ್‌ನಲ್ಲಿ 59,203 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದೆ.
ಏಪ್ರಿಲ್‌ನಲ್ಲಿ ದೇಶಿಯ ಮಾರಾಟವೂ ಕೂಡ ಶೇ 10 ರಷ್ಟು ಕುಸಿತವಾಗಿದೆ. ಈ ಏಪ್ರಿಲ್‌ನಲ್ಲಿ 44,001 ವಾಹನಗಳು ಮಾರಾಟವಾಗಿದ್ದರೆ, ಕಳೆದ 2021 ರ ಏಪ್ರಿಲ್‌ನಲ್ಲಿ 49,002 ವಾಹನಗಳು ಮಾರಾಟ ಆಗಿದ್ದವು.
ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆವಾಹನಗಳ ರಪ್ತುಈ ಏಪ್ರಿಲ್‌ನಲ್ಲಿ ಹೆಚ್ಚಳವಾಗಿದೆ. ಅಂದರೆ 12,200 ವಾಹನಗಳನ್ನು ರಪ್ತು ಮಾಡಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 10,201 ವಾಹನಗಳನ್ನು ರಪ್ತು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.