ADVERTISEMENT

ಮಹೀಂದ್ರ: Supro Profit Truck Excel ಬಿಡುಗಡೆ; ಬೆಲೆ ಇಷ್ಟು...

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 13:38 IST
Last Updated 18 ಜನವರಿ 2024, 13:38 IST
ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಹೊಸ ಸುಪ್ರೊ ಪ್ರಾಫಿಟ್‌ ಟ್ರಕ್‌ ಎಕ್ಸೆಲ್‌ ಸರಣಿಯನ್ನು ಗುರುವಾರ ಬಿಡುಗಡೆ ಮಾಡಿದೆ  
ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಹೊಸ ಸುಪ್ರೊ ಪ್ರಾಫಿಟ್‌ ಟ್ರಕ್‌ ಎಕ್ಸೆಲ್‌ ಸರಣಿಯನ್ನು ಗುರುವಾರ ಬಿಡುಗಡೆ ಮಾಡಿದೆ     

ಬೆಂಗಳೂರು: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಹೊಸ ಸುಪ್ರೊ ಪ್ರಾಫಿಟ್‌ ಟ್ರಕ್‌ ಎಕ್ಸೆಲ್‌ ಸರಣಿಯನ್ನು ಗುರುವಾರ ಬಿಡುಗಡೆ ಮಾಡಿದೆ.

ಈ ಟ್ರಕ್‌ಗಳು ಡಿಸೇಲ್‌ ಮತ್ತು ಸಿಎನ್‌ಜಿ ಡ್ಯುಯೋ ಮಾದರಿಯಲ್ಲಿ ಲಭ್ಯವಿವೆ. ಇದರ ಬೆಲೆ ಬೆಂಗಳೂರಿನಲ್ಲಿ (ಎಕ್ಸ್‌ ಷೋ ರೂಂ) ಕ್ರಮವಾಗಿ ₹6.61 ಲಕ್ಷ ಮತ್ತು ₹6.93 ಇದೆ. ಬಿಳಿ, ನೀಲಿ ಮತ್ತು ಕೆಂಪು ಬಣ್ಣದಲ್ಲಿ ಟ್ರಕ್‌ ದೊರೆಯಲಿದೆ. 

ಬಿಡುಗಡೆ ಕಾರ್ಯಕ್ರಮದಲ್ಲಿ ಕಂಪನಿಯ ದಕ್ಷಿಣ ವಲಯದ ಮುಖ್ಯಸ್ಥ ಅರುಣಾಂಗ್ಶು ರಾಯ್, ಕಮರ್ಷಿಯಲ್‌ ವಾಹನದ ಉತ್ಪಾದನಾ ಯೋಜನೆಯ ಮುಖ್ಯಸ್ಥ ಸತೀಶ್‌ ಕರಂಡಿಕರ್‌ ಮತ್ತು ಉತ್ಪಾದನಾ ವಿಭಾಗದ ಮುಖ್ಯಸ್ಥ ವೆಂಕಟ್‌ ಶ್ರೀನಿವಾಸ್‌ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.