ಬೆಂಗಳೂರು: ಮಹೀಂದ್ರಾ ಆ್ಯಂಡ್ಮಹೀಂದ್ರಾ ಕಳೆದ ಆಗಸ್ಟ್‌ನಲ್ಲಿ ಪರಿಚಯಿಸಿದ್ದ ಎಕ್ಸ್‌ಯುವಿ700 ಕೆಲವೊಂದು ಆವೃತ್ತಿ ಬುಕ್ ಮಾಡಿದರೆ, ಡೆಲಿವರಿ ಪಡೆಯಲು 18 ತಿಂಗಳು ಕಾಯಬೇಕಿದೆ.
ಹೆಚ್ಚಿನ ಬುಕಿಂಗ್ ಮತ್ತು ಸೆಮಿಕಂಡಕ್ಟರ್ ಪೂರೈಕೆ ಕೊರತೆಯಿಂದಾಗಿ ಹೊಸ ಕಾರು ತಯಾರಿಕೆ ತಡವಾಗುತ್ತಿದೆ.
ಅಕ್ಟೋಬರ್ 7ರಂದು ಎಕ್ಸ್‌ಯುವಿ700 ಕಾರು ಬುಕಿಂಗ್‌ಗೆ ತೆರೆದುಕೊಂಡಿತ್ತು. ಮೊದಲ ದಿನ, ಆರಂಭದ ಒಂದು ಗಂಟೆಯಲ್ಲೇ 25,000 ಕಾರು ಬುಕಿಂಗ್ ಆಗಿ ದಾಖಲೆ ಸೃಷ್ಟಿಯಾಗಿತ್ತು.
ಚಿಪ್ ಮತ್ತು ವಿವಿಧ ಬಿಡಿಭಾಗಗಳ ಪೂರೈಕೆ ವ್ಯತ್ಯಯದಿಂದಾಗಿ ಹೊಸ ಕಾರು ಡೆಲಿವರಿ ತಡವಾಗುತ್ತಿದೆ ಎಂದು ‘ಝೀ‘ ವರದಿ ಮಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಹೊಸ ಎಕ್ಸ್‌ಯುವಿ700 ಲಭ್ಯವಿದ್ದು, ₹12.49 ಲಕ್ಷ (ಎಕ್ಸ್ ಶೋರೂಮ್ ದರ) ದಿಂದ ಆರಂಭವಾಗಿ ₹22.99 ಲಕ್ಷದವರೆಗೆ ಇದೆ.
ಆರಂಭಿಕ ಆವೃತ್ತಿ ಬುಕ್ ಮಾಡಿದರೂ ಕನಿಷ್ಠ ಕಾಯುವಿಕೆ ಅವಧಿ 6 ತಿಂಗಳು ಇದ್ದು, ಟಾಪ್ ಎಂಡ್ ಕೆಲವೊಂದು ಆವೃತ್ತಿಗೆ 18 ತಿಂಗಳು ಕಾಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.