ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಕ್ಯಾಂಪ‍್ಯಾಕ್ಟ್ ಕಾರ್ ಬಲೆನೊ ಆರ್‌ಎಸ್ ಬೆಲೆಯಲ್ಲಿ ₹1 ಲಕ್ಷ ಇಳಿಕೆ ಮಾಡಿದೆ.ದೆಹಲಿಯಲ್ಲಿ ಎಕ್ಸ್ ಷೋರೂಂ ಬೆಲೆ₹ 7.88 ಲಕ್ಷದಿಂದ ಆರಂಭವಾಗಲಿದೆ.
ಕೆಲವು ಮಾದರಿಗಳ ಎಕ್ಸ್ ಷೋರೂಂ ಬೆಲೆಯಲ್ಲಿ ₹ 5 ಸಾವಿರದವರೆಗೂ ಇಳಿಕೆ ಮಾಡಿದ ಎರಡು ದಿನಗಳ ಬಳಿಕ ಈ ಘೋಷಣೆ ಮಾಡಿದೆ.
ಆಲ್ಟೊ 800, ಆಲ್ಟೊ ಕೆ10,ವಿತಾರಾ ಬ್ರೇಜಾ, ಎಸ್ ಕ್ರಾಸ್, ಇಗ್ನಿಸ್, ಡೀಸೆಲ್ ಎಂಜಿನ್‌ನ ಸ್ವಿಫ್ಟ್, ಬಲೆನೊ, ಡಿಸೈರ್, ಟೂರ್ ಎಸ್ ಕಾರುಗಳ ಬೆಲೆಯಲ್ಲಿ ಇಳಿಕೆ ಆಗಿದೆ.ಈ ಮಾದರಿಗಳ ಬೆಲೆ ₹ 2.93 ಲಕ್ಷದಿಂದ ₹ 11.49 ಲಕ್ಷದವರೆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.