ನವದೆಹಲಿ: ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿ 'ಮಾರುತಿ ಸುಜುಕಿ ಇಂಡಿಯಾ' ಹಾಗೂ ಫೋರ್ಡ್ ಇಂಡಿಯಾ ಬಿಎಸ್–6 ಗುಣಮಟ್ಟದ ಕಾರುಗಳನ್ನು ಬಿಡುಗಡೆ ಮಾಡಿರುವುದಾಗಿ ಪ್ರಕಟಿಸಿಕೊಂಡಿವೆ.
ಮಾರುತಿಯ ಸೆಲೆರಿಯೊ ಮತ್ತು ಫೋರ್ಡ್‌ನ ಕಾಂಪ್ಯಾಕ್ಟ್ ಎಸ್‌ಯುವಿ ಇಕೊಸ್ಫೋರ್ಟ್ ಬಿಡುಗಡೆ ಮಾಡಲಾಗಿದೆ. ಬಿಎಸ್–6 ಗುಣಮಟ್ಟದ ಪೆಟ್ರೋಲ್ ಎಂಜಿನ್ ಹೊಂದಿರುವಹ್ಯಾಚ್‌ಬ್ಯಾಕ್ ಕಾರು 'ಸೆಲೆರಿಯೊ' ಬೆಲೆ ₹ 4.41 ಲಕ್ಷದಿಂದ ₹ 5.72 ಲಕ್ಷ ನಿಗದಿಯಾಗಿದೆ. ದೆಹಲಿ ವಲಯದಲ್ಲಿ ಬೆಲೆ ₹ 5,000 ದಿಂದ ₹ 6,000 ಕಡಿಮೆ ಇದೆ.
ಇಕೊಸ್ಫೋರ್ಟ್ ಎಸ್‌ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಮಾದರಿಯಲ್ಲೂ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಆವೃತ್ತಿಯ ಇಕೊಸ್ಫೋರ್ಟ್ ₹ 8.04– ₹ 11.43 ಲಕ್ಷ ಹಾಗೂ 1.5 ಲೀಟರ್ ಡೀಸೆಲ್ ಮಾದರಿಗೆ ₹ 8.54– ₹ 11.58 ಲಕ್ಷ ನಿಗದಿಯಾಗಿದೆ. ಡೀಸೆಲ್ ಮಾದರಿಯು 100 ಪಿಎಸ್ ಪವರ್ ಸಾಮರ್ಥ್ಯ, 5 ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಪೆಟ್ರೋಲ್ ಮಾದರಿಯಲ್ಲಿ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಲಭ್ಯವಿದ್ದು, 122 ಪಿಎಸ್ ಪವರ್ ಹೊಮ್ಮಿಸುವ ಸಾಮರ್ಥ್ಯವಿದೆ. ಕಂಪನಿ 3 ವರ್ಷ ವಾರೆಂಟಿ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.