ನವದೆಹಲಿ: ಮಾರುತಿ ಸುಜುಕಿ ಇಂಡಿಯಾವು ಹ್ಯಾಚ್‌ಬ್ಯಾಕ್ ಕಾರು ಸ್ವಿಫ್ಟ್‌ನ ಬೆಲೆಯನ್ನು ₹25 ಸಾವಿರ ಹಾಗೂ ಎಸ್‌ಯುವಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಆವೃತ್ತಿಯ ಬೆಲೆಯನ್ನು ₹19 ಸಾವಿರ ಹೆಚ್ಚಿಸಿದೆ.
ಈ ಬೆಲೆ ಹೆಚ್ಚಳವು ಬುಧವಾರದಿಂದಲೇ ಜಾರಿಗೆ ಬಂದಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
ಸದ್ಯ ನವದೆಹಲಿಯಲ್ಲಿ ಸ್ವಿಫ್ಟ್‌ನ ಎಕ್ಸ್ ಷೋ ರೂಂ ಬೆಲೆ ₹5.99 ಲಕ್ಷದಿಂದ ₹8.89 ಲಕ್ಷ ಇದೆ. ಗ್ರ್ಯಾಂಡ್ ವಿಟಾರಾದ ಎಕ್ಸ್ ಷೋ ರೂಂ ಬೆಲೆ ₹10.8 ಲಕ್ಷ ಇದೆ.
ಕ್ರ್ಯಾಷ್ ಟೆಸ್ಟ್
ಮಾರುತಿ ಸುಜುಕಿಯು ತನ್ನ ಕೆಲವು ಕಾರುಗಳನ್ನು ಭಾರತ್–ನ್ಯೂ ಕಾರ್ ಅಸೆಸ್‌ಮೆಂಟ್ ಪೋಗ್ರಾಂ (ಭಾರತ್–ಎನ್‌ಸಿಎಪಿ) ಕ್ರ್ಯಾಷ್ ಟೆಸ್ಟ್‌ಗೆ ಒಳಪಡಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರವು ಭಾರತ್–ಎನ್‌ಸಿಎಪಿಗೆ ಚಾಲನೆ ನೀಡಿತ್ತು. ಇದರ ಮೂಲಕ ದೇಶದಲ್ಲಿ ಕಾರುಗಳ ಸುರಕ್ಷತಾ ಸೌಲಭ್ಯಗಳನ್ನು ಅಳೆಯಲಾಗುತ್ತದೆ. ವಯಸ್ಕರು ಹಾಗೂ ಮಕ್ಕಳಿಗೆ ಕಾರು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಸೊನ್ನೆಯಿಂದ ಐದರವರೆಗಿನ ಶ್ರೇಯಾಂಕದ ಮೂಲಕ ತಿಳಿಸಲಾಗುತ್ತದೆ.
ಕಳೆದ ವರ್ಷ ಟಾಟಾ ಮೋಟರ್ಸ್‌ನ ಎಸ್‌ಯುವಿಗಳಾದ ಸಫಾರಿ ಹಾಗೂ ಹ್ಯಾರಿಯರ್ ಕ್ರ್ಯಾಷ್ ಟೆಸ್ಟ್‌ಗೆ ಒಳಪಟ್ಟಿದ್ದವು. ಈ ಎರಡೂ ಕಾರುಗಳಿಗೆ ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಐದು ಶ್ರೇಯಾಂಕ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.