ಬೆಂಗಳೂರು:ಮಾರುತಿ ಸುಜುಕಿ ಹೊಸ ಕಾರು ಎಸ್–ಪ್ರೆಸ್ಸೊ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ವಾಹನಗಳ ಸಾಲಿಗೆ ಸೇರ್ಪಡೆಯಾಗಿದೆ.ವಾಹನ ಉತ್ಪಾದನೆ ಕಡಿತ, ಮಾರಾಟ ಪ್ರಮಾಣದಲ್ಲಿ ಇಳಿಕೆಯ ನಡುವೆಯೂ ಒಂದೇ ತಿಂಗಳಲ್ಲಿ 10,000ಕ್ಕೂ ಹೆಚ್ಚು ಕಾರುಗಳು ಮಾರಾಟಗೊಂಡಿವೆ.
ಆಲ್ಟೊ ಕೆ10 ಮಾದರಿಯ 1.0 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಕಾರು ಬಿಎಸ್6 ಗುಣಮಟ್ಟವನ್ನು ಕಾಯ್ದುಕೊಂಡಿದೆ. 5,500 ಆರ್‌ಪಿಎಂನೊಂದಿಗೆ 67 ಬಿಎಚ್‌ಪಿ ಶಕ್ತಿಯನ್ನು ಹೊರಹಾಕುವ ಸಾಮರ್ಥ್ಯವನ್ನು ಇಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ ಆಟೊ ಗೇರ್ ಶಿಫ್ಟ್ ಆಯ್ಕೆಯು VXI, VXI+ ಮಾದರಿಗಳಲ್ಲಿ ಲಭ್ಯವಿದೆ.
ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ಎಸ್–ಪ್ರೆಸ್ಸೊ ಅತಿ ಹೆಚ್ಚು ಮಾರಾಟಗೊಂಡಿರುವ ಕಾರುಗಳ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಾರುತಿ ಸುಜುಕಿ ತನ್ನ ಹೊಸ ಕಾರನ್ನು ಕಾರನ್ನುಮಿನಿ ಎಸ್‌ಯುವಿ ಎಂದೇ ಕರೆಯುತ್ತಿದ್ದು, ಅಕ್ಟೋಬರ್ ಒಂದೇ ತಿಂಗಳಲ್ಲಿ 10,634 ಎಸ್–ಪ್ರೆಸ್ಸೊ ಕಾರುಗಳನ್ನು ಮಾರಾಟ ಮಾಡಿದೆ. ಸಂಸ್ಥೆಯ ಅರೇನಾ ಬ್ರಾಂಡೆಡ್ ರೂಂಗಳಲ್ಲಿ ಈ ಕಾರುಗಳ ಮಾರಾಟ ನಡೆಯುತ್ತಿದೆ.
ಮನರಂಜನೆ ಮತ್ತು ಮಾಹಿತಿಗೆ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್, ವಾಯ್ಸ್ ಮತ್ತು ಆಡಿಯೊ ನಿಯಂತ್ರಣ ಹೊಂದಿರುವ ಸ್ಟೀರಿಂಗ್ ವೀಲ್, ಮಧ್ಯದಲ್ಲಿ ಅಳವಡಿಸಲಾಗಿರುವ ವೇಗ ಮತ್ತು ಸಂಚರಿಸಿದ ದೂರವನ್ನು ತೋರಿಸುವ ಡಿಜಿಟಲ್ ಮೀಟರ್, ಯುಎಸ್‌ಬಿ ಮತ್ತು 12 ವೋಲ್ಟ್ಸ್ ಚಾರ್ಜರ್, ಸಾಮಾನು ಸಂಗ್ರಹಕ್ಕೆ ಸಾಕಷ್ಟ ಸ್ಥಳ, ಚಾಲಕನ ಕಡೆಗೆ ಏರ್‌ಬ್ಯಾಗ್, ಬ್ರೇಕಿಂಗ್‌ನಲ್ಲಿ ಎಬಿಎಸ್ ಜತೆಗೆ ಇಬಿಡಿ ವ್ಯವಸ್ಥೆ, ರಿವರ್ಸ್ ಪಾರ್ಕಿಂಗ್ ಸೆನ್ಸರ್, ವೇಗದ ಕುರಿತು ಎಚ್ಚರಿಕೆ ನೀಡುವ ವ್ಯವಸ್ಥೆಗಳನ್ನು ಎಸ್–ಪ್ರೆಸ್ಸೊ ಒಳಗೊಂಡಿದೆ.
ಎಸ್–ಪ್ರೆಸ್ಸೊ ಕಾರುಗಳಿಗೆ ಬೆಂಗಳೂರಿನಲ್ಲಿ ಎಕ್ಸ್–ಷೋರೂಂ ಬೆಲೆ ₹3.69 ಲಕ್ಷ– ₹4.91 ಲಕ್ಷ(ವಿವಿಧ ಮಾದರಿಗಳಿಗೆ ಅನುಗುಣವಾಗಿ) ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.