ನವದೆಹಲಿ: ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಸೆಪ್ಟೆಂಬರ್‌ನಿಂದ ತನ್ನ ಎಲ್ಲ ಮಾದರಿಯ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೋಮವಾರ ತಿಳಿಸಿದೆ.
ವಿವಿಧ ರೀತಿಯ ತಯಾರಿಕಾ ವೆಚ್ಚಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಕಳೆದ ವರ್ಷದಿಂದ ಕಂಪನಿಯ ವಾಹನಗಳ ವೆಚ್ಚವು ನಿರಂತರವಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನಗಳ ಬೆಲೆ ಏರಿಕೆಯ ಮೂಲಕ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಕಂಪನಿಯು ಸದ್ಯ ₹ 2.99 ಲಕ್ಷದಿಂದ ₹ 12.39 ಲಕ್ಷದವರೆಗಿನ ಬೆಲೆಯ (ಎಕ್ಸ್‌ಷೋರೂಂ) ವಾಹನಗಳನ್ನು ಮಾರಾಟ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.