ADVERTISEMENT

ಬೆಂಗಳೂರಿನಲ್ಲಿ ಬೆಂಜ್‌ ಎಸ್‌ಯುವಿ ‌‌ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 5:37 IST
Last Updated 7 ಡಿಸೆಂಬರ್ 2019, 5:37 IST
‘ಮರ್ಸಿಡಿಸ್ ಬೆಂಜ್’ ಹೊಸ ವಿನ್ಯಾಸದ ‘ಎಸ್‍ಯುವಿ- ಜಿಎಲ್‍ಸಿ’ ಕಾರನ್ನು ಸುಂದರಂ ಮೋಟರ್ಸ್‌ನ ಸಿಇಒ ಎಸ್‌.ಎಸ್. ರಾಮಸುಬ್ರಮಣಿಯಂ ಅವರು ಶುಕ್ರವಾರ ಬಿಡುಗಡೆ ಮಾಡಿದರು
‘ಮರ್ಸಿಡಿಸ್ ಬೆಂಜ್’ ಹೊಸ ವಿನ್ಯಾಸದ ‘ಎಸ್‍ಯುವಿ- ಜಿಎಲ್‍ಸಿ’ ಕಾರನ್ನು ಸುಂದರಂ ಮೋಟರ್ಸ್‌ನ ಸಿಇಒ ಎಸ್‌.ಎಸ್. ರಾಮಸುಬ್ರಮಣಿಯಂ ಅವರು ಶುಕ್ರವಾರ ಬಿಡುಗಡೆ ಮಾಡಿದರು   

ಬೆಂಗಳೂರು: ಐಷಾರಾಮಿ ಕಾರು ತಯಾರಿಕಾ ಕಂಪನಿ ‘ಮರ್ಸಿಡಿಸ್ ಬೆಂಜ್’ನ ಹೊಸ ವಿನ್ಯಾಸದ ‘ಎಸ್‍ಯುವಿ- ಜಿಎಲ್‍ಸಿ’ ಕಾರನ್ನು ನಗರದ ಕಸ್ತೂರಬಾ ರಸ್ತೆಯಲ್ಲಿರುವ ಸುಂದರಂ ಮೋಟರ್ಸ್‌ನ ಶೋರೂಂನಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು.

‘ಎನ್‌ಟಿಜಿ 6 ಟೆಲಿಮ್ಯಾಟಿಕ್ಸ್‌ನೊಂದಿಗೆ ಬಿಡುಗಡೆಯಾಗಿರುವ ಭಾರತದ ಮರ್ಸಿಡಿಸ್ ಬೆಂಜ್ ವಾಹನ ಇದಾಗಿದೆ. ಐಷಾರಾಮಿ ವಾಹನಗಳ ವಿಭಾಗದಲ್ಲೇ ಅತ್ಯಂತ ಆಧುನಿಕ ಹಾಗೂ ಕ್ರಾಂತಿಕಾರಿ ಸೌಲಭ್ಯಗಳನ್ನು ಈ ವಾಹನ ಹೊಂದಿದೆ’ ಎಂದು ಸುಂದರಂ ಮೋಟರ್ಸ್‌ನ ಸಿಇಒ ಎಸ್.ಎಸ್.ರಾಮಸುಬ್ರಮಣಿಯಂ ತಿಳಿಸಿದರು.

ಎಂಜಿನ್‌ ಬಿಎಸ್–6 ಮಾನದಂಡಗಳಿಗೆ ಪೂರಕವಾಗಿದೆ. ಜಿಎಲ್‍ಸಿ 200’ನ ಬೆಲೆ ₹ 52.75 ಲಕ್ಷ ಹಾಗೂ ‘ಜಿಎಲ್‍ಸಿ 220ಡಿ 4ಮ್ಯಾಟಿಕ್’ನ ಬೆಲೆ ₹ 57.75 ಲಕ್ಷದಿಂದ ಆರಂಭವಾಗುತ್ತದೆ. ವಿಲಾಸಿ ಹಾಗೂ ಅತ್ಯಂತ ವೇಗವಾಗಿ ಚಲಾಯಿಸುವಂತಹ ಕಾರುಗಳನ್ನು ಇಷ್ಟಪಡುವ ನಗರ ವಾಸಿಗಳಿಗೆಂದೇ ಈ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ADVERTISEMENT

‘ಗ್ರಾಹಕ ಕೇಂದ್ರಿತ ಕಾರುಗಳನ್ನು ಬಿಡುಗಡೆ ಮಾಡುವಲ್ಲಿ ನಮ್ಮ ಕಂಪನಿ ಮುಂಚೂಣಿ ಸ್ಥಾನದಲ್ಲಿದೆ. ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡುವುದು ಬೆಂಜ್ ಕಾರುಗಳ ವಿಶೇಷ. ಅತ್ಯಾಧುನಿಕ ತಂತ್ರಜ್ಞಾನ ಈ ವಾಹನದಲ್ಲಿದ್ದು, ಗ್ರಾಹಕರಿಗೆ ಇಷ್ಟವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.