ನವದೆಹಲಿ: ರೇಡಿಯೊ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆ ಓಲಾ, ದೇಶದಲ್ಲಿ ಬಳಸಿದ ಕಾರುಗಳ ಉದ್ಯಮವನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಓಲಾ ಕಾರ್ಸ್ ಸೇವೆಯನ್ನು ಆರಂಭಿಸಿದ ಒಂದು ವರ್ಷದಲ್ಲಿಯೇ ಸ್ಥಗಿತಗೊಳಿಸುತ್ತಿದ್ದು, ಮುಂದೆ ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ತಯಾರಿಕೆ ಕ್ಷೇತ್ರದತ್ತ ಗಮನ ಹರಿಸಲಿದೆ.
ಈ ಮೊದಲು ಓಲಾ ಆರಂಭಿಸಿದ್ದ ಓಲಾ ಕೆಫೆ, ಫುಡ್‌ಪಾಂಡ, ಓಲಾ ಫುಡ್ಸ್ ಉದ್ಯಮವನ್ನು ಸ್ಥಗಿತಗೊಳಿಸಿತ್ತು. ಈ ಬಾರಿ ಓಲಾ ಡ್ಯಾಶ್ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.
ಪ್ರಸಕ್ತ ಮಾರುಕಟ್ಟೆಗೆ ಅನುಗುಣವಾಗಿ ಓಲಾ ಈ ನಿರ್ಧಾರಕ್ಕೆ ಮುಂದಾಗಿದ್ದು, ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ.
ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ನಂತರದ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಓಲಾ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.