ನವದೆಹಲಿ: ಓಮೈಕ್ರಾನ್ ಹರಡುವುದನ್ನು ತಡೆಯಲು ಸೆಮಿಕಂಡಕ್ಟರ್ ಚಿಪ್ ತಯಾರಿಸುವ ದೇಶಗಳು ಲಾಕ್‌ಡೌನ್ ಜಾರಿಗೊಳಿಸಿದಲ್ಲಿ ಭಾರತದಲ್ಲಿ ಪ್ರಯಾಣಿಕ ವಾಹನಗಳ ಪೂರೈಕೆ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಆತಂಕ ವ್ಯಕ್ತಪಡಿಸಿದೆ.
ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಚಿಪ್ ಕೊರತೆಯ ಸಮಸ್ಯೆ ನಿವಾರಣೆ ಆಗುವ ಆಗುವ ನಿರೀಕ್ಷೆ ಇದೆ. ಆದರೆ, ಓಮೈಕ್ರಾನ್ ನಿಯಂತ್ರಿಸಲು ಚಿಪ್ ತಯಾರಿಕಾ ದೇಶಗಳು ಲಾಕ್‌ಡೌನ್ ಜಾರಿಗೊಳಿಸಿದರೆ ಅಥವಾ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ಬೇಕಾದ ಸಾಧನಗಳಿಗೆ ಮಾತ್ರವೇ ಚಿಪ್ ತಯಾರಿಸಲು ಆದ್ಯತೆ ನೀಡಿದಲ್ಲಿ ಪ್ರಯಾಣಿಕ ವಾಹನಗಳ ಪೂರೈಕೆ ಸಮಸ್ಯೆಯು ಇನ್ನಷ್ಟು ಬಿಗಡಾಯಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.
ಕೋವಿಡ್ ಸಂಪೂರ್ಣವಾಗಿ ಇಲ್ಲವಾದರೆ 2023ರ ವೇಳೆಗೆ ವಾಹನೋದ್ಯಮವು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದು ಕೋವಿಡ್ ಪೂರ್ವದ ಮಟ್ಟಕ್ಕೆ ಮರಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ. ಕೋವಿಡ್‌ನ ಮೂರನೇ ಅಲೆಯು ಬಂದಲ್ಲಿ ದ್ವಿಚಕ್ರ ವಾಹನ ಬೇಡಿಕೆಯು ಇನ್ನಷ್ಟು ಕುಸಿತ ಕಾಣಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.