ಬೆಂಗಳೂರು: ಮಹಾನಗರಗಳಲ್ಲಿ ಮಾತ್ರವಲ್ಲದೆ, ಇಂದು ಸಣ್ಣ ಪಟ್ಟಣಗಳಲ್ಲಿ ಕೂಡ ಕಾರು ಖರೀದಿಯ ಕ್ರೇಜ್ ಹೆಚ್ಚುತ್ತಿದೆ. ಆದರೆ ಹೊಸ ಕಾರು ಖರೀದಿಸುವುದು ಮತ್ತು ಅದನ್ನು ನಿರ್ವಹಣೆ ಮಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಜತೆಗೆ ಕಾರು ಖರೀದಿಸಿದ ಬಳಿಕ ಇರುವ ಖರ್ಚು ವೆಚ್ಚಗಳನ್ನು ಸರಿದೂಗಿಸುವುದು ಕೂಡ ಹಲವರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಇರುವ ಪರ್ಯಾಯ ಆಯ್ಕೆಯೆಂದರೆ ಬಾಡಿಗೆ ಕಾರು ಪಡೆದು ಓಡಿಸುವುದು.
ಬೆಂಗಳೂರು ಸಹಿತ ಹಲವು ನಗರಗಳಲ್ಲಿ ರೆವ್‌ನಂತಹ ಕಂಪನಿಗಳು ಬಾಡಿಗೆಗೆ ಕಾರು ನೀಡುತ್ತವೆ. ಇಲ್ಲಿ ಕಾರುಗಳನ್ನು ದಿನದ ಮಟ್ಟಿಗೆ, ವಾರದ ಮಟ್ಟಿಗೆ ಹಾಗೂ ತಿಂಗಳ ಅವಧಿಗೆ ಬಾಡಿಗೆಗೆ ಪಡೆಯಲು ಅವಕಾಶವಿದೆ.
ಬಾಡಿಗೆ ಕಾರು ಓಡಿಸಿ..
1-36 ತಿಂಗಳ ಅವಧಿಗೆ ಕಾರು ಬಾಡಿಗೆಗೆ ಪಡೆದುಕೊಳ್ಳಬಹುದು. ಇದಕ್ಕೆ ₹0 ಡೌನ್‌ಪೇಮೆಂಟ್ ಮತ್ತು ₹0 ರಸ್ತೆ ತೆರಿಗೆ ಇರುವುದರಿಂದ, ನೀವು ಯಾವುದೇ ಹೆಚ್ಚಿನ ಖರ್ಚು ಇಲ್ಲದೆ ವಾಹನ ಬಾಡಿಗೆಗೆ ಪಡೆದು ಓಡಿಸಬಹುದು. ಅಲ್ಲದೆ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮತ್ತು ಕಾಂಪಾಕ್ಟ್ ಎಸ್‌ಯುವಿಯಂತಹ ವಿವಿಧ ಮಾದರಿ ಮತ್ತು ಗಾತ್ರದ ಕಾರುಗಳು ಅಲ್ಲಿ ಲಭ್ಯವಿದೆ.
ಬೇಡಿಕೆ ಹೆಚ್ಚಿಸಿಕೊಂಡ ಕಾರು
ಕೋವಿಡ್ ಲಾಕ್‌ಡೌನ್ ಬಳಿಕ ಖಾಸಗಿ ಪ್ರಯಾಣಿಕ ವಾಹನಗಳ ಬಳಕೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆಯ ಬದಲು ಹೆಚ್ಚಿನ ಜನರು ಖಾಸಗಿ ವಾಹನವನ್ನೇ ಬಯಸುತ್ತಿದ್ದಾರೆ, ಹೀಗಾಗಿ ಬಾಡಿಗೆ ಕಾರು ಖರೀದಿಗೂ ಅವಕಾಶ ಜಾಸ್ತಿಯಾಗಿದೆ. ನಿರ್ವಹಣೆ ಮತ್ತು ಸರ್ವಿಸ್ ಕಿರಿಕಿರಿಯಿಲ್ಲದೆಯೇ ಆಕರ್ಷಕ ಕಾರು ಹೊಂದಲು ಇದು ಅವಕಾಶ ಕಲ್ಪಿಸುತ್ತದೆ. ಜತೆಗೆ ಬಾಡಿಗೆಗೆ ಕಾರು ಒದಗಿಸುವ ರೆವ್‌ನಂತಹ ಕಂಪನಿಗಳು ಸ್ಯಾನಿಟೈಸ್‌ನಂತಹ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಗ್ರಾಹಕರ ಮನೆಬಾಗಿಲಿಗೆ ಕಾರು ಪೂರೈಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.