ADVERTISEMENT

ಪ್ರಯಾಣಿಕ ವಾಹನ ಸಗಟು ಮಾರಾಟ ಶೇ 11ರಷ್ಟು ಹೆಚ್ಚಳ

ಸೆಮಿಕಂಡಕ್ಟರ್‌ ಚಿಪ್‌ ಪೂರೈಕೆಯಲ್ಲಿ ಸುಧಾರಣೆ; ಹಬ್ಬದ ಋತುವಿಗೆ ತಯಾರಿಕೆ ಹೆಚ್ಚಳ

ಪಿಟಿಐ
Published 12 ಆಗಸ್ಟ್ 2022, 11:04 IST
Last Updated 12 ಆಗಸ್ಟ್ 2022, 11:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು 2021ರ ಜುಲೈಗೆ ಹೋಲಿಸಿದರೆ 2022ರ ಜುಲೈನಲ್ಲಿ ಶೇಕಡ 11ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಶುಕ್ರವಾರ ತಿಳಿಸಿದೆ.

ಸೆಮಿಕಂಡಕ್ಟರ್‌ ಚಿಪ್‌ ಪೂರೈಕೆ ಸುಧಾರಿಸಿದೆ. ಹೀಗಾಗಿ ಕಂಪನಿಗಳು ಹಬ್ಬದ ಋತುವಿನ ಬೇಡಿಕೆಗಾಗಿ ತಯಾರಿಕೆಯನ್ನು ಹೆಚ್ಚಿಸಲು ಅನುಕೂಲ ಆಗಿದೆ ಎಂದು ಅದು ಹೇಳಿದೆ.

ಪ್ರಯಾಣಿಕ ವಾಹನಗಳ ಸಗಟು ಮಾರಾಟ 2022ರ ಜುಲೈನಲ್ಲಿ 2.93 ಲಕ್ಷ ಆಗಿದೆ. 2021ರ ಜುಲೈನಲ್ಲಿ 2.64 ಲಕ್ಷ ಇತ್ತು.

ADVERTISEMENT

‘ಆರಂಭಿಕ ಹಂತದ ಪ್ರಯಾಣಿಕ ಕಾರು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರುಕಟ್ಟೆಯು ಇನ್ನಷ್ಟೇ ಚೇತರಿಕೆ ಕಂಡುಕೊಳ್ಳಬೇಕಿದೆ’ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ಹೇಳಿದ್ದಾರೆ.

‘ದ್ವಿಚಕ್ರ ವಾಹನಗಳ ಮಾರಾಟವು 2016ರ ಜುಲೈಗೆ ಹೋಲಿಸಿದರೆ 2022ರ ಜುಲೈನಲ್ಲಿ ಕಡಿಮೆ ಇದೆ. ತ್ರಿಚಕ್ರ ವಾಹನಗಳ ಮಾರಾಟವು ಸಹ 2006ಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಇದೆ. ರೆಪೊ ದರವನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಿರುವುದು ವಾಹನ ಸಾಲವನ್ನು ತುಟ್ಟಿಯಾಗಿಸಲಿದೆ. ಇದರಿಂದಾಗಿ ಆರಂಭಿಕ ಹಂತದ ವಾಹನಗಳ ಮಾರಾಟದಲ್ಲಿ ಚೇತರಿಕೆಯು ಇನ್ನಷ್ಟು ಕಷ್ಟವಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಿರುವುದರಿಂದ ಪ್ರಯಾಣಿಕ ವಾಹನಗಳ ಮಾರಾಟ ಹೆಚ್ಚಾಗಿದೆ’ ಎಂದು ಮೆನನ್‌ ಹೇಳಿದ್ದಾರೆ.

ಮಾರಾಟದ ವಿವರ (ಲಕ್ಷಗಳಲ್ಲಿ)

ವಾಹನ; 2021 ಜುಲೈ; 2022 ಜುಲೈ
ಪ್ರಯಾಣಿಕ ವಾಹನ; 1.30; 1.43; 11%
ಕಾರು; 1.30; 1.40; 10%
ಯುಟಿಲಿಟಿ ವಾಹನ; 1.24; 1.37; 11%
ದ್ವಿಚಕ್ರ; 12.60; 13.81; 10%

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.