ADVERTISEMENT

ಭಾರತ್‌–ಎನ್‌ಸಿಎಪಿ: ಪಂಚ್‌, ನೆಕ್ಸಾನ್‌ಗೆ 5 ಸ್ಟಾರ್‌ ಶ್ರೇಯಾಂಕ

ಪಿಟಿಐ
Published 13 ಜೂನ್ 2024, 14:20 IST
Last Updated 13 ಜೂನ್ 2024, 14:20 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಭಾರತ್‌–ನ್ಯೂ ಕಾರ್‌ ಅಸೆಸ್‌ಮೆಂಟ್‌ ಪೋಗ್ರಾಂನ (ಭಾರತ್‌–ಎನ್‌ಸಿಎಪಿ) ಕ್ರ್ಯಾಷ್‌ ಟೆಸ್ಟ್‌ನಲ್ಲಿ ಟಾಟಾ ಮೋಟರ್ಸ್‌ನ ವಿದ್ಯುತ್‌ಚಾಲಿತ ಪಂಚ್‌ ಮತ್ತು ನೆಕ್ಸಾನ್ಕಾ ರಿಗೆ 5 ಸ್ಟಾರ್‌ ಶ್ರೇಯಾಂಕ ಲಭಿಸಿದೆ.

ವಿದ್ಯುತ್‌ಚಾಲಿತ ವಾಹನಗಳ ವಿಭಾಗದಲ್ಲಿ ಈ ಶ್ರೇಯಾಂಕ ಪಡೆದ ದೇಶದ ಮೊದಲ ಕಾರುಗಳು ಎಂಬ ಶ್ರೇಯ ಪಡೆದಿವೆ. 

ADVERTISEMENT

‘ಪಂಚ್‌ ಮತ್ತು ನೆಕ್ಸಾನ್ ಭಾರತದ ಆಟೊಮೊಬೈಲ್‌ ಮಾರುಕಟ್ಟೆಯ ವಿದ್ಯುತ್‌ಚಾಲಿತ ವಾಹನಗಳ ವಿಭಾಗದಲ್ಲಿ 5 ಸ್ಟಾರ್‌ ಶ್ರೇಯಾಂಕ ಪಡೆದಿರುವುದು ಹೆಮ್ಮೆಯ ಸಂಗತಿ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರು ‘ಎಕ್ಸ್‌’ನಲ್ಲಿ ಅಭಿನಂದಿಸಿದ್ದಾರೆ.

‘ಭಾರತ್ ಎನ್‌ಸಿಎಪಿ’ ಮೂಲಕ ನೀಡುವ ಶ್ರೇಯಾಂಕವು ವಾಹನಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಗ್ರಾಹಕರಿಗೆ ಮನದಟ್ಟು ಮಾಡುತ್ತದೆ. ಅಲ್ಲದೆ, ಸುರಕ್ಷಿತ ವಾಹನಗಳ ಆಯ್ಕೆ ಮತ್ತು ಖರೀದಿಸಲು ಅವರಿಗೆ ನೆರವಾಗಲಿದೆ’ ಎಂದು ಹೇಳಿದ್ದಾರೆ.

ಜಾಗತಿಕ ಮಾನದಂಡದ ಪ್ರಕಾರ ಭಾರತ್‌–ಎನ್‌ಸಿಎಪಿ ಅಡಿಯಲ್ಲಿ ಕ್ರ್ಯಾಷ್‌ ಟೆಸ್ಟ್‌ ನಡೆಯುತ್ತದೆ. ಸಾರಿಗೆ ಸಚಿವಾಲಯದ ನಿಯಮಾವಳಿಗಳ ಅನ್ವಯವೇ ರಸ್ತೆ ಮತ್ತು ವಾಹನ ಸುರಕ್ಷತೆಯ ಮಾನದಂಡ ಆಧರಿಸಿ ಶ್ರೇಯಾಂಕ ನೀಡುವ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.