ನವದೆಹಲಿ: ರೆನೊ ಇಂಡಿಯಾ ಕಂಪನಿಯು 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ ಹೊಸ ಎಸ್‌ಯುವಿ ‘ಡಸ್ಟರ್’ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಸ್‌ಯುವಿ ವಿಭಾಗದಲ್ಲಿ ಈ ಡಸ್ಟರ್ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನಲ್ಲಿ ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಸ್ ಮತ್ತು ಆರ್‌ಎಕ್ಸ್‌ಜೆಡ್ ಅವತರಣಿಕೆಗಳಲ್ಲಿ ಲಭ್ಯವಿದೆ. ಸಿವಿಟಿಯಲ್ಲಿ ಆರ್‌ಎಕ್ಸ್‌ಎಸ್ ಮತ್ತು ಆರ್‌ಎಕ್ಸ್‌ಜೆಡ್ ಅವತರಣಿಕೆಗಳಲ್ಲಿ ಲಭ್ಯವಿದೆ. ಬೆಲೆ ₹ 10.49 ಲಕ್ಷದಿಂದ ₹ 13.59 ಲಕ್ಷದವರೆಗೆ ನಿಗದಿ ಮಾಡಲಾಗಿದೆ.
ಹಾಲಿ ಇರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನೂ ಮುಂದುವರಿಸುವುದಾಗಿ ಕಂಪನಿ ಹೇಳಿದ್ದು, ಇದರ ಬೆಲೆ ₹ 8.59 ಲಕ್ಷದಿಂದ ಅರಂಭವಾಗಲಿದೆ. ಗ್ಯಾಸೊಲಿನ್ ಡೈರೆಕ್ಟ್ ಇಂಜೆಕ್ಷನ್ (ಜಿಡಿಐ) ತಂತ್ರಜ್ಞಾನವು ಗರಿಷ್ಠ ಸಾಮರ್ಥ್ಯ ಮತ್ತು ದಕ್ಷತೆಯನ್ನು ನೀಡಲಿದೆ ಎಂದು ಹೇಳಿದೆ.
‘ಭಾರತದಲ್ಲಿ ಡಸ್ಟರ್ ಪ್ರಯಾಣದ ಹೊಸ ಅಧ್ಯಾಯ ಆರಂಭವಾಗಿದೆ. ಇದು ವಿಶ್ವ ದರ್ಜೆಯ ಎಂಜಿನ್ ಆಗಿದೆ. ಭಾರತದ ಹಲವು ಕುಟುಂಬಗಳು ಈ ಎಸ್‌ಯುವಿ ಜತೆಗೆ ಬಲಿಷ್ಠವಾದ ಬಾಂಧವ್ಯ ಹೊಂದಿವೆ. ಪ್ರಯಾಸರಹಿತವಾದ ಚಾಲನಾ ಅನುಭವ ಪಡೆಯಲು ಇನ್ನೂ ಹಲವು ಜನರಿಗೆ ಈ ಶಕ್ತಿಶಾಲಿ ಡಸ್ಟರ್ ಪ್ರೇರೇಪಿಸಲಿದೆ’ ಎಂದು ಕಂಪನಿಯ ಭಾರತದ ಸಿಇಒ ವೆಂಕಟರಾಮ್ ಮಮಿಲ್ಲಪಲ್ಲೆ ಹೇಳಿದ್ದಾರೆ.
ವೈಶಿಷ್ಟ್ಯ
* 17.64 ಇಂಚು ಟಚ್‌ಸ್ಕ್ರೀನ್ ಮೀಡಿಯಾನಾವ್–ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೊ, ವಾಯ್ಸ್ ರೆಕಗ್ನಿಷನ್
* ಸ್ಮಾರ್ಟ್ ಸ್ಟಾರ್ಟ್/ಸ್ಟಾಪ್ ವ್ಯವಸ್ಥೆ
* ಎಬಿಎಸ್, ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್
* ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.