ADVERTISEMENT

ಜನವರಿ 1 ರಿಂದ ಬೆಲೆ ಏರಿಕೆಗೆ ಸ್ಕೋಡಾ ಚಿಂತನೆ

ಪಿಟಿಐ
Published 29 ಡಿಸೆಂಬರ್ 2020, 11:01 IST
Last Updated 29 ಡಿಸೆಂಬರ್ 2020, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಜನವರಿ 1 ರಿಂದ ಕಾರುಗಳ ಬೆಲೆಯನ್ನು ಶೇ 2.5ರವರೆಗೂ ಏರಿಕೆ ಮಾಡುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ಸ್ಕೋಡಾ ಕಂಪನಿ ಮಂಗಳವಾರ ಹೇಳಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆಯಲ್ಲಿ ಸಾಕಷ್ಟು ಏರಿಳಿತ ಆಗುತ್ತಿದೆ. ವಿದೇಶಿ ವಿನಿಮಯ ದರದಲ್ಲಿಯೂ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಈ ಕಾರಣಗಳಿಂದಾಗಿ ತಯಾರಿಕಾ ವೆಚ್ಚ ಹೆಚ್ಚಾಗುತ್ತಿದೆ’ ಎಂದು ಸ್ಕೋಡಾ ಆಟೊ ಇಂಡಿಯಾದ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT