ADVERTISEMENT

Tata Motors: ವಾಹನ ಮಾರಾಟದಲ್ಲಿ ಶೇ 25 ಏರಿಕೆ

ಪಿಟಿಐ
Published 1 ಡಿಸೆಂಬರ್ 2021, 13:42 IST
Last Updated 1 ಡಿಸೆಂಬರ್ 2021, 13:42 IST
ಟಾಟಾ ಮೋಟಾರ್ಸ್ ನವೆಂಬರ್ ತಿಂಗಳ ವರದಿ ಪ್ರಕಟ
ಟಾಟಾ ಮೋಟಾರ್ಸ್ ನವೆಂಬರ್ ತಿಂಗಳ ವರದಿ ಪ್ರಕಟ   

ನವದೆಹಲಿ: ಟಾಟಾ ಮೋಟಾರ್ಸ್ ವಾಹನ ಮಾರಾಟದಲ್ಲಿ ನವೆಂಬರ್ ತಿಂಗಳಿನಲ್ಲಿ ಶೇ 25 ಏರಿಕೆ ದಾಖಲಾಗಿದೆ.

2020ರ ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ವಿವಿಧ ವರ್ಗದ ಒಟ್ಟು 49,650 ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ ಈ ವರ್ಷದ ನವೆಂಬರ್‌ನಲ್ಲಿ 62,192 ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ 25 ಪ್ರಗತಿ ದಾಖಲಿಸಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ 47,859 ಪ್ರಯಾಣಿಕ ವಾಹನ ಮಾರಾಟವಾಗಿತ್ತು. ಈ ಬಾರಿ 58,073 ಪ್ರಯಾಣಿಕ ವಾಹನ ಮಾರಾಟವಾಗಿದ್ದು, ಶೇ 21 ಏರಿಕೆ ಕಂಡುಬಂದಿದೆ.

ADVERTISEMENT

ಉಳಿದಂತೆ, ಕಳೆದ ವರ್ಷ ಇದೇ ಅವಧಿಯಲ್ಲಿ 27,982 ವಾಣಿಜ್ಯ ಬಳಕೆಯ ವಾಹನಗಳು ಮಾರಾಟವಾಗಿದ್ದರೆ, ಈ ಬಾರಿ 32,345 ವಾಹನ ಮಾರಾಟವಾಗಿದ್ದು, ಶೇ 15 ಹೆಚ್ಚಳವಾಗಿದೆ.

ಹೊಸ ಮಾದರಿಯ ವಿನ್ಯಾಸ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆಯಿಂದಾಗಿ ಮಾರುಕಟ್ಟೆಯಲ್ಲಿ ಟಾಟಾ ವಾಹನಗಳಿಗೆ ಬೇಡಿಕೆ ಸೃಷ್ಟಿಯಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.