ADVERTISEMENT

ಟಾಟಾದ ಹೊಸ ‘ಕರ್ವ್ SUV ಕೂಪ್’ ಅನಾವರಣ: ವಿಶೇಷತೆಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2024, 12:46 IST
Last Updated 29 ಜುಲೈ 2024, 12:46 IST
<div class="paragraphs"><p>ಟಾಟಾ ಕರ್ವ್</p></div>

ಟಾಟಾ ಕರ್ವ್

   

ಬೆಂಗಳೂರು: ದೇಶದ ಪ್ರಮುಖ ವಾಹನ ತಯಾರಕ ಟಾಟಾ ಮೋಟಾರ್ಸ್ ‘ಟಾಟಾ ಕರ್ವ್ ಐಸಿಇ’ ಮತ್ತು ಇವಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಇದಾಗಿದೆ.

ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಅನಾವರಣಗೊಳ್ಳಲಿದೆ. ವಿಶೇಷವೆಂದರೆ ಮೊದಲು ಟಾಟಾ ಕರ್ವ್ ನ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ಬಿಡುಗಡೆಯಾಗಲಿವೆ.

ADVERTISEMENT

ಟಾಟಾ ಕರ್ವ್ ಅನಾವರಣದ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶೈಲೇಶ್ ಚಂದ್ರ, ‘ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಕ್ಷೇತ್ರದ ಪ್ರವರ್ತಕನಾಗಿದೆ. ನಾವು ಸದಾ ಆಕರ್ಷಕ ವಿನ್ಯಾಸ ಮತ್ತು ಅತ್ಯಪೂರ್ವ ಕಾರ್ಯಕ್ಷಮತೆ ಹೊಂದಿರುವ ಉತ್ಪನ್ನಗಳನ್ನು ನೀಡುತ್ತಾ ಬಂದಿದ್ದೇವೆ. ಕೂಪ್ ರಚನೆಯುಳ್ಳ ಇದರ ವಿಶಿಷ್ಟ ವಿನ್ಯಾಸವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲಿದೆ. ಟಾಟಾ ಕರ್ವ್ ಮಲ್ಟಿ ಪವರ್ ಟ್ರೇನ್ ಗಳಲ್ಲಿ ಲಭ್ಯವಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಗಳಲ್ಲಿ ದೊರೆಯಲಿದೆ’ ಎಂದು ಹೇಳಿದರು.

ಟಾಟಾ ಕರ್ವ್, ಆಕರ್ಷಕ ವಿನ್ಯಾಸ, ಉತ್ತಮ ಪ್ರಾಯೋಗಿಕತೆ ಮತ್ತು ಉಲ್ಲಾಸದಾಯಕ ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣವಾಗಿದೆ. ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಕರ್ವ್ ಇವಿಯಲ್ಲಿ ವರ್ಚುವಲ್ ಸನ್‌ರೈಸ್ ಬಣ್ಣ ಮತ್ತು ಕರ್ವ್ ಇಸಿಇ ಗೋಲ್ಡ್ ಎಸೆನ್ಸ್ ಬಣ್ಣದಲ್ಲಿ ಲಭ್ಯವಿರಲಿದೆ.

ಟಾಟಾ ಕರ್ವ್ ಆಧುನಿಕ ಮತ್ತು ಅತ್ಯುತ್ತಮ ಇಂಟೀರಿಯರ್ ಹೊಂದಿದೆ. ವಿಶಾಲವಾದ ಕ್ಯಾಬಿನ್ ಸ್ಪೇಸ್ ಲಭ್ಯವಿದೆ. ಅತ್ಯುತ್ತಮ ದರ್ಜೆಯ ತಂತ್ರಜ್ಞಾನ, ಚಂದದ ಬಣ್ಣಗಳು, ಉತ್ತಮ ಸಾಮಾಗ್ರಿಗಳು ಮತ್ತು ಉತ್ತಮ ಫಿನಿಶಿಂಗ್ ಕಾರಣದಿಂದ ಕಾರಿನ ಕ್ಯಾಬಿನ್ ಸೊಗಸಾಗಿ ರೂಪುಗೊಂಡಿದೆ. ಇದರ ಪ್ಯಾನೋರಾಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕು ಬೀಳಲು ಅನುವು ಮಾಡಿಕೊಡುತ್ತದೆ.

ಟಾಟಾ ಕರ್ವ್ ಶಕ್ತಿಯುತ ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಅವುಗಳ ಜೊತೆಗೆ ಕೆಟಗರಿಯಲ್ಲಿಯೇ ಉತ್ತಮ ಅನ್ನಿಸುವ ಲಾಂಗ್ ಡ್ರೈವಿಂಗ್ ರೇಂಜ್ ಒದಗಿಸುವ ಎಲೆಕ್ಟ್ರಿಕ್ ವೇರಿಯಂಟ್‌ಗಳು ಲಭ್ಯವಾಗಲಿದೆ ಸುಧಾರಿತ ಇನ್ಫೋಟೇನ್ಮೆಂಟ್, ದೊಡ್ಡ ಸ್ಕ್ರೀನ್ ಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲಜಿ ಹೊಂದಿದೆ.

ಕರ್ವ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: https://ev.tatamotors.com/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.