ನವದೆಹಲಿ: ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ಎಲ್ಲ ರೀತಿಯ ಪ್ರಯಾಣಿಕ ವಾಹನದ ಬೆಲೆಯನ್ನು ಸರಾಸರಿ ಶೇ 0.7ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟರ್ಸ್ ಭಾನುವಾರ ತಿಳಿಸಿದೆ.
ದರ ಹೆಚ್ಚಳವು 2024ರ ಫೆಬ್ರುವರಿ 1ರಿಂದ ಜಾರಿ ಆಗಲಿದೆ. ತಯಾರಿಕಾ ವೆಚ್ಚದಲ್ಲಿನ ಏರಿಕೆಯನ್ನು ಭಾಗಶಃ ಸರಿದೂಗಿಸಲು ಈ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಪಂಚ್, ನೆಕ್ಸಾನ್ ಮತ್ತು ಹ್ಯಾರಿಯರ್ ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತದೆ.
ದರ ಹೆಚ್ಚಳವು 2024ರ ಫೆಬ್ರುವರಿ 1ರಿಂದ ಜಾರಿ ಆಗಲಿದೆ. ತಯಾರಿಕಾ ವೆಚ್ಚದಲ್ಲಿನ ಏರಿಕೆಯನ್ನು ಭಾಗಶಃ ಸರಿದೂಗಿಸಲು ಈ ಏರಿಕೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.