ನ್ಯೂಯಾರ್ಕ್: 2022ರ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿರುವ ಟೆಸ್ಲಾ, ದಾಖಲೆ ಪ್ರಮಾಣದ ಆದಾಯ ಗಳಿಸಿರುವುದಾಗಿ ತಿಳಿಸಿದೆ.
ಎಲೊನ್ ಮಸ್ಕ್ ನೇತೃತ್ವದ ಟೆಸ್ಲಾ, ಚೀನಾದಲ್ಲಿನ ಕೋವಿಡ್ ನಿರ್ಬಂಧ, ಪೂರೈಕೆ ವ್ಯತ್ಯಯ ಮತ್ತು ಬಿಡಿಭಾಗಗಳ ಕೊರತೆಯಂತಹ ಸವಾಲುಗಳ ನಡುವೆಯೂ ಗರಿಷ್ಠ ಆದಾಯ ಗಳಿಸುವಲ್ಲಿ ಯಶಸ್ಸು ಕಂಡಿದೆ.
ಜನವರಿಯಿಂದ ಆರಂಭವಾಗಿ ಮಾರ್ಚ್‌ಗೆ ಕೊನೆಗೊಂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ, ಟೆಸ್ಲಾ $3.3 ಬಿಲಿಯನ್ ವಹಿವಾಟು ನಡೆಸಿದ್ದು, ಗ್ರಾಹಕರ ಬೇಡಿಕೆಗೆ ನಿರೀಕ್ಷೆಗೂ ಮೀರಿ ಸ್ಪಂದಿಸಲಾಗಿದೆ ಎಂದು ಕಂಪನಿ ವರದಿ ಹೇಳಿದೆ.
ಅಮೆರಿಕದ ಟೆಕ್ಸಾಸ್ ಮತ್ತು ಜರ್ಮನಿಯಲ್ಲಿನ ನೂತನ ಘಟಕಗಳ ಮೂಲಕ ಹೆಚ್ಚಿನ ಕಾರು ಉತ್ಪಾದನೆ ಮಾಡಲಾಗುತ್ತಿದೆ. ಜತೆಗೆ ವಾಣಿಜ್ಯ ಬಳಕೆಯ ವಾಹನ ಕೂಡ ಒದಗಿಸಲಾಗುತ್ತಿದೆ ಎಂದು ಟೆಸ್ಲಾ ಹೇಳಿದೆ.
ಈ ವರ್ಷ ಅತ್ಯಧಿಕ ಸಂಖ್ಯೆಯ ಕಾರುಗಳನ್ನು ಡೆಲಿವರಿ ನೀಡಲು ಕಂಪನಿ ಸಜ್ಜಾಗಿದೆ ಎಂದು ಟೆಸ್ಲಾ ಸಿಇಒ ಎಲೊನ್ ಮಸ್ಕ್ ಇತ್ತೀಚೆಗೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.