ADVERTISEMENT

ಕಾರು ಮಾರಾಟ: ‌ಫೋಕ್ಸ್‌ವ್ಯಾಗನ್‌ ಹಿಂದಿಕ್ಕಿ ವಿಶ್ವದ ನಂ.1 ಸ್ಥಾನಕ್ಕೇರಿದ ಟೊಯೊಟಾ

ರಾಯಿಟರ್ಸ್
Published 28 ಜನವರಿ 2021, 7:53 IST
Last Updated 28 ಜನವರಿ 2021, 7:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೋಕಿಯೊ: ಜಪಾನ್‌ನ ಪ್ರಮುಖ ಕಾರು ತಯಾರಿಕಾ ಕಂಪೆನಿ ಟೊಯೊಟಾ ಕಳೆದ ವರ್ಷ (2020ನೇ ಸಾಲಿನಲ್ಲಿ) ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮೂಲಕ ಜರ್ಮನಿ ಮೂಲದ ವೋಕ್ಸ್‌ವ್ಯಾಗನ್‌ ಕಂಪನಿಯನ್ನು ಹಿಂದಿಕ್ಕಿದೆ.

ಈ ಮೂಲಕ ಟೊಯೊಟಾ ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಶ್ವದ ಅತಿ ಹೆಚ್ಚು ಕಾರು ಮಾರಾಟ ಮಾಡಿದ ತಯಾರಿಕಾ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಟೊಯೊಟಾ, ಕಳೆದ ವರ್ಷ ತನ್ನ ಕಾರುಗಳ ಮಾರಾಟದಲ್ಲಿ ಶೇಕಡ 11.3 ರಷ್ಟು ಕುಸಿತ ಕಂಡಿದ್ದು, ಒಟ್ಟು 95 ಲಕ್ಷ 28 ಸಾವಿರ ವಾಹನಗಳನ್ನು ಮಾರಾಟ ಮಾಡಿದೆ. ಇದೇ ವರ್ಷ ವೋಕ್ಸ್‌ವ್ಯಾಗನ್‌ ಕಾರುಗಳ ಮಾರಾಟದಲ್ಲಿ ಶೇ.15.2ರಷ್ಟು ಕುಸಿತ ಕಂಡಿದ್ದು, 93 ಲಕ್ಷದ 5 ಸಾವಿರ ವಾಹನಗಳನ್ನು ಮಾರಾಟ ಮಾಡಿದೆ.

ADVERTISEMENT

‘ನಾವು ನಮ್ಮ ಶ್ರೇಯಾಂಕದ ಬಗ್ಗೆ ಚಿಂತಿಸುವುದಿಲ್ಲ. ಆದರೆ, ನಮ್ಮ ಗ್ರಾಹಕರಿಗೆ ಸೇವೆ ನೀಡುವುದರ ಬಗ್ಗೆ ಗಮನ ಹರಿಸುತ್ತೇವೆ’ ಎಂದು ಟೊಯೊಟಾ ವಕ್ತಾರರು ತಿಳಿಸಿದ್ದಾರೆ.

ವಿಶ್ವದಾದ್ಯಂತ ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಗ್ರಾಹಕರು ಕಾರು ಶೋ ರೂಂಗಳಿಗೆ ಭೇಟಿ ನೀಡಲು ಹಿಂದೇಟು ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.