ನವದೆಹಲಿ: 2023ರ ಮಾರ್ಚ್‌ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ವಾಹನಗಳ ಮಾರಾಟ ಶೇ 9 ರಷ್ಟು ಹೆಚ್ಚಳವಾಗಿದ್ದು, 18,670 ವಾಹನಗಳನ್ನು ಮಾರಾಟ ಮಾಡಿದ್ದೇವೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೇಳಿದೆ.
2022ರ ಮಾರ್ಚ್‌ಗೆ ಅಂತ್ಯವಾದ ವರ್ಷದಲ್ಲಿ 17,131 ವಾಹನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು ಎಂದು ಕಿರ್ಲೋಸ್ಕರ್ ಮಾಹಿತಿ ನೀಡಿದೆ.
2022–23ನೇ ಸಾಲಿನಲ್ಲಿ ಸಗಟು ಮಾರಾಟದಲ್ಲಿ ಶೇ 41 ರಷ್ಟು ಏರಿಕೆ ಕಂಡಿದ್ದು, 1,74,015 ವಾಹನಗಳನ್ನು ಮಾರಾಟ ಮಾಡಲಾಗಿದೆ. ಹಿಂದಿನ ವರ್ಷ 1,23,770 ವಾಹನಗಳು ಬಿಕರಿಯಾಗಿದ್ದವು.
ಸಕಾರಾತ್ಮಕ ಬೆಳವಣಿಗೆಯೊಂದಿಗೆ ಈ ಹಣಕಾಸು ವರ್ಷವನ್ನು ಮುಗಿಸಲು ನಾವು ಸಂತುಷ್ಟರಾಗಿದ್ದೇವೆ. 2024–25ರ ಅವಧಿಯಲ್ಲೂ ಇದೇ ಬೆಳವಣಿಗೆ ಇರಲಿದೆ ಎಂದು ನಾವು ಆಶಿಸುತ್ತೇವೆ ಎಂದು ಕಿರ್ಲೋಸ್ಕರ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.