ನವದೆಹಲಿ: ಟೊಯೋಟ ಮೋಟರ್ ಕಾರ್ಪ್ ಮತ್ತು ಸುಜುಕಿ ಮೋಟರ್ ಕಾರ್ಪ್ ಕಂಪನಿಗಳು ಜೊತೆಗೂಡಿ ಭಾರತದಲ್ಲಿ ಹೈಬ್ರಿಡ್ ವಾಹನ ತಯಾರಿಸಲಿವೆ.
ದಕ್ಷಿಣ ಭಾರತದಲ್ಲಿ ಇರುವ ಟೊಯೋಟ ಘಟಕದಲ್ಲಿ ಸುಜುಕಿ ಅಭಿವೃದ್ಧಿಪಡಿಸಿರುವ ಹೈಬ್ರಿಡ್ ಎಸ್‌ಯುವಿ ತಯಾರಿಕೆಯು ಆಗಸ್ಟ್‌ನಲ್ಲಿ ಆರಂಭ ಆಗಲಿದೆ ಎಂದು ಟೊಯೋಟ ಮತ್ತು ಸುಜುಕಿ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಎರಡೂ ಕಂಪನಿಗಳ ಮಧ್ಯೆ 2017ರಲ್ಲಿ ನಡೆದಿರುವ ಪಾಲುದಾರಿಕೆಯ ಭಾಗವಾಗಿ ಹೈಬ್ರಿಡ್ ವಾಹನವನ್ನು ರೂಪಿಸಲಾಗುತ್ತಿದೆ. ಭಾರತದಲ್ಲಿ ಮಾರಾಟ ಮಾಡುವುದಷ್ಟೇ ಅಲ್ಲದೆ, ಆಫ್ರಿಕಾ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.