ನವದೆಹಲಿ: ಟೊಯೋಟ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮುಂದಿನ ತಿಂಗಳಿನಿಂದ ಎಲ್ಲ ಮಾದರಿ ಕಾರುಗಳ ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿದೆ.
ಎಲ್ಲ ಮಾದರಿಗಳ ದರ ಪರಿಷ್ಕರಿಸಲಾಗುತ್ತಿದ್ದು, ಏಪ್ರಿಲ್ 1, 2021ರಿಂದ ಅನ್ವಯವಾಗಲಿದೆ ಎಂದು ಟೊಯೋಟ ತಿಳಿಸಿದೆ.
ವಿವಿಧ ಬಿಡಿಭಾಗಗಳ ದರ ಏರಿಕೆಯಿಂದಾಗಿ ಕಾರು ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ದರ ಏರಿಕೆ ಅನಿವಾರ್ಯ ಎಂದು ಟೊಯೋಟ ಹೇಳಿದೆ.
ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಸಾಧ್ಯವಾದಷ್ಟು ವೆಚ್ಚ ಇಳಿಕೆಗೆ ಯತ್ನಿಸಲಾಗಿದೆ. ಕೆಲವೊಂದು ಭಾಗಗಳ ದರ ಹೆಚ್ಚಾಗಿದ್ದು, ಬೆಲೆ ಏರಿಕೆ ಮಾಡಬೇಕಾಗಿದೆ ಎಂದು ಕಂಪನಿ ತಿಳಿಸಿದೆ.
ನಮ್ಮದು ಗ್ರಾಹಕ ಕೇಂದ್ರಿತ ಕಂಪನಿಯಾಗಿದ್ದು, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ಕಂಪನಿ ಬದ್ಧವಾಗಿದೆ ಎಂದು ಟೊಯೋಟ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.