ಚೆನ್ನೈ: ದ್ವಿಚಕ್ರ ವಾಹನಗಳ ರಫ್ತಿನಲ್ಲಿಪ್ರಸಕ್ತ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 10 ಲಕ್ಷದ ಮೈಲಿಗಲ್ಲು ತಲುಪಿರುವುದಾಗಿ ಟಿವಿಎಸ್ ಮೋಟರ್ ಕಂಪನಿಯು ಬುಧವಾರ ತಿಳಿಸಿದೆ.
ಟಿವಿಎಸ್ ಅಪಾಚೆ ಸರಣಿ, ಟಿವಿಎಸ್ ಎಚ್‌ಎಲ್‌ಎಕ್ಸ್ ಸರಣಿ, ಟಿವಿಎಸ್ ರೈಡರ್ ಮತ್ತು ಟಿವಿಎಸ್ ನಿಯೊ ಸರಣಿಗಳು ಪ್ರಮುಖವಾಗಿ ಮಾರಾಟವಾಗಿವೆ. ಜಾಗತಿಕವಾಗಿ ದ್ವಿಚಕ್ರ ವಾಹನಗಳ ಮಾರಾಟವು ಹೆಚ್ಚಾಗಿರುವುದರಿಂದ ರಫ್ತು ವಹಿವಾಟು ಈ ಮಟ್ಟದ ಬೆಳವಣಿಗೆ ಕಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
‘ಗುಣಮಟ್ಟ, ತಂತ್ರಜ್ಞಾನ ಮತ್ತು ಗ್ರಾಹಕರನ್ನು ತೃಪ್ತಿಪಡಿಸುವ ವಿಚಾರದಲ್ಲಿ ಕಂಪನಿಯು ಯಾವಾಗಲೂ ಬದ್ಧತೆ ತೋರುತ್ತದೆ. ಆಕರ್ಷಕ ಉತ್ಪನ್ನಗಳೊಂದಿಗೆ ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ಹೊಸ ಭೌಗೋಳಿಕ ಪ್ರದೇಶಗಳಿಗೆ ವಹಿವಾಟು ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಕಂಪನಿಯ ನಿರ್ದೇಶಕ ಕೆ.ಎನ್. ರಾಧಾಕೃಷ್ಣನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.