ನವದೆಹಲಿ: ಭಾರತದಲ್ಲಿ ಪೊಲೊ ಮತ್ತು ವೆಂಟೊ ಮಾದರಿಗಳ ಬೆಲೆಯನ್ನು ಜನವರಿಯಿಂದ ಶೇ 2.5ರವರೆಗೂ ಏರಿಕೆ ಮಾಡುವುದಾಗಿ ಫೋಕ್ಸ್ವ್ಯಾಗನ್ ಕಂಪನಿ ಗುರುವಾರ ತಿಳಿಸಿದೆ.
ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ಫೋಕ್ಸ್ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರುತಿ ಸುಜುಕಿ, ನಿಸಾನ್, ರೆನೊ ಇಂಡಿಯಾ, ಹೋಂಡಾ ಕಾರ್ಸ್, ಮಹೀಂದ್ರಾ, ಫೋರ್ಡ್ ಸೇರಿದಂತೆ ಇನ್ನೂ ಹಲವು ಕಂಪನಿಗಳು ಸಹ ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.