ಗುಂಗುರು ಕೂದಲಿನ ಚೆಲುವೆಯ ಉಂಗುರದಲೆಯೊಳು ಮನ ಕಳೆದುಹೋಗುವುದು ಸಹಜ. ಆದರೆ ಈ ಅಲೆಅಲೆಯಾದ ಕೇಶರಾಶಿಯ ರಕ್ಷಣೆ ಅಷ್ಟು ಸುಲಭವಲ್ಲ. ಪ್ರತಿದಿನದ ಕಾಳಜಿ ಇಲ್ಲದಿದ್ದರೆ ಗುಂಗುರು ಕೂದಲು ಕುರುಚಲು ಪೊದೆಯಂತೆ ಆಗುತ್ತವೆ. ಆಮೇಲೆ ಸಿಕ್ಕು ಬಿಡಿಸುವುದು, ತಲೆ ಬಾಚುವುದು ಕಷ್ಟವಾಗುತ್ತದೆ.
ಗುಂಗುರು ಕೂದಲಿನ ಸಂರಕ್ಷಣೆಗೆ ನಿಯಮಿತವಾಗಿ ತಲೆ ತೊಳೆದುಕೊಳ್ಳಬೇಕು. ಗುಂಗುರು ಕೂದಲನ್ನು ತೊಳೆಯಲು, ಸಾಮಾನ್ಯಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ.
ಮೃದು ಎನಿಸುವ ಶಾಂಪು ಬಳಸಿ. ತಲೆ ತೊಳೆದುಕೊಳ್ಳುವ ಅರ್ಧ ಗಂಟೆ ಮುಂಚೆ ಉಗುರು ಬಿಸಿ ಎಣ್ಣೆಯ ಮಸಾಜು ಮಾಡಿಕೊಳ್ಳಿ.
ನಿಮ್ಮ ಟವಲ್ ಆಯ್ಕೆ ಆದಷ್ಟೂ ಹತ್ತಿಯದ್ದಾಗಿರಲಿ. ಟರ್ಕಿಯಂಥ ಟವಲ್ ಬಳಸಿದರೆ ಕೆಲವೊಮ್ಮೆ ಕೂದಲು ಸಿಕ್ಕಾಗುವ ಸಾಧ್ಯತೆ ಇರುತ್ತದೆ.
ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಅದು ಕೂದಲನ್ನು ಇನ್ನಷ್ಟು ಶುಷ್ಕಗೊಳಿಸುತ್ತದೆ.
ಮಲಗುವ ಮುನ್ನ ಸದಾ ನಿಮ್ಮ ಕೂದಲನ್ನು ಬಾಚಿಕೊಂಡು, ಸ್ಯಾಟಿನ್ ಅಥವಾ ತೆಳುವಾದ ಬಟ್ಟೆಯೊಂದನ್ನು ತಲೆಗೆ ಕಟ್ಟಿಕೊಂಡು ಮಲಗಿ
ಇದೂ ಸಹ ಕೂದಲಿನ ಸಂರಕ್ಷಣೆಗೆ ಅತ್ಯಗತ್ಯವಾಗಿದೆ. ತಲೆ ತೊಳೆದುಕೊಳ್ಳುವಾಗ ಅಕ್ಕಿ ತೊಳೆಯಲು ಬಳಸಿದ ನೀರನ್ನು ಕಂಡೀಷನರ್ ರೀತಿಯಂತೆ ಬಳಸಬಹುದಾಗಿದೆ.
ಕೂದಲ ಹೊಳಪಿಗೆ ಮತ್ತು ನುಣುಪಿಗೆ ಮೊಟ್ಟೆಯ ಬಿಳಿಭಾಗವನ್ನು ವಾರಕ್ಕೆ ಒಮ್ಮೆಯಾದರೂ ಲೇಪಿಸಿ ತಲೆ ತೊಳೆದುಕೊಳ್ಳಿ.
ಕೂದಲು ಅತಿಯಾಗಿ ಶುಷ್ಕವಾಗದಂತೆ ನೋಡಿಕೊಳ್ಳಲು ಅಕ್ಕಿಹಿಟ್ಟು, ಮೊಸರಿನ ಲೇಪನವನ್ನು ಬಳಸಬಹುದು.
ಆಕರ್ಷಕ ಗುಂಗರು ಕೂದಲು ಪಡೆಯಲು ಈ ಉಪಾಯಗಳು ಸಾಕಷ್ಟು ಸಹಾಯ ಮಾಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.