ADVERTISEMENT

ಮಿಸೆಸ್‌ ಗ್ರ್ಯಾಂಡ್‌ ಯೂನಿವರ್ಸ್‌ ಆದರು ಡಾ.ಶಶಿಲೇಖಾ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 12:16 IST
Last Updated 11 ಡಿಸೆಂಬರ್ 2021, 12:16 IST
ಡಾ.ಶಶಿಲೇಖಾ ನಾಯರ್‌ ಮತ್ತು ಐಪಿಎಸ್‌ ಅಧಿಕಾರಿ ಡಿ. ರೂಪಾ
ಡಾ.ಶಶಿಲೇಖಾ ನಾಯರ್‌ ಮತ್ತು ಐಪಿಎಸ್‌ ಅಧಿಕಾರಿ ಡಿ. ರೂಪಾ   

ಡಾ.ಶಶಿಲೇಖಾ ನಾಯರ್‌ ಮಿಸೆಸ್‌ ಗ್ರ್ಯಾಂಡ್‌ ಯೂನಿವರ್ಸ್‌ (2021) ಆಗಿ ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಮಿಸೆಸ್‌ ಇಂಡಿಯಾ ಕೇರಳ ಆಗಿದ್ದರು.

ಆನ್‌ಲೈನ್‌ನಲ್ಲಿ ನಡೆದ ಸ್ಪರ್ಧೆ: ಈ ಸ್ಪರ್ಧೆ ಫಿಲಿಪೈನ್ಸ್‌ನ ಮನಿಲಾದದಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್‌ ಕಾರಣದಿಂದಾಗಿ ಈ ವರ್ಷ ಆನ್‌ಲೈನ್‌ನಲ್ಲಿ ನಡೆಯಿತು. ಸಂಘಟಕರುಮಿಸೆಸ್‌ ಗ್ರ್ಯಾಂಡ್‌ ಯೂನಿವರ್ಸ್‌ ಕಿರೀಟವನ್ನು ಕಳುಹಿಸಿಕೊಟ್ಟರು. ಬೆಂಗಳೂರಿನಲ್ಲಿ ಐಪಿಎಸ್‌ ಅಧಿಕಾರಿ ಡಿ.ರೂಪಾ ಅವರು ಶಶಿಲೇಖಾ ಅವರಿಗೆ ಕಿರೀಟ ತೊಡಿಸಿ ಗೌರವಿಸಿದರು.

ಯಾರು ಶಶಿಲೇಖಾ ನಾಯರ್‌?

ADVERTISEMENT

ಡಾ.ಶಶಿಲೇಖಾ ನಾಯರ್ ಮೈಕ್ರೋಬಯಾಲಜಿ ಪದವೀಧರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಸೇಂಟ್ ಮದರ್ ಥೆರೆಸಾ ವಿಶ್ವವಿದ್ಯಾನಿಲಯವು ಮಾನವಿಕ ವಿಷಯದಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಅವರು ಉದ್ಯಮಿ, ಭರತನಾಟ್ಯ ನೃತ್ಯಗಾರ್ತಿ ಮತ್ತು ಇಬ್ಬರು ಮಕ್ಕಳ ತಾಯಿ. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಐಟಿ ಕಂಪೆನಿಯೊಂದರ ಸಿಇಒ ಆಗಿದ್ದಾರೆ. ಅವರು ಸೇಂಟ್ ಮದರ್ ಥೆರೆಸಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ತಮಗೆ ದಿ.ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ತಮ್ಮ ಜೀವನದ ಶ್ರೇಷ್ಠ ಸ್ಫೂರ್ತಿ ಎಂದು ಹೇಳುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು. ಭರತನಾಟ್ಯವನ್ನು ಕಲಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿಯೂ ಆಸಕ್ತರಾಗಿದ್ದಾರೆ ಎಂದುಮಿಸೆಸ್‌ ಗ್ರ್ಯಾಂಡ್‌ ಯೂನಿವರ್ಸ್‌ ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.