ರಂಗು ರಂಗಿನ ವೇದಿಕೆ, ಅಲ್ಲಿ ಬಣ್ಣ ಬಣ್ಣದ ಹೊಸ ವಿನ್ಯಾಸದ ತೊಡುಗೆ, ಇವು ಪ್ರತಿಬಿಂಬ ಕಾರ್ಯಕ್ರಮದಲ್ಲಿ ಕಂಡ ನೋಟ.
ಕೆಎಲ್ಇ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿಗಳು ಡಿಸೈನ್ ಮಾಡಿದ್ದ ಉಡುಗೆಗಳನ್ನು ಅದೇ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೊಟ್ಟು ಸಂಭ್ರಮಿಸಿದರು.
ನಂದಿನಿ ನಾಗರಾಜ್ ಅವರ ಸಹಯೋಗದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ವಿದ್ಯಾರ್ಥಿಗಳು ತಾವೇ ಡಿಸೈನ್ ಮಾಡಿದ್ದ ಉಡುಗೆಗಳನ್ನು ಅನಾವರಣ ಮಾಡಿದರು.
ಪ್ರಖ್ಯಾತ ಫ್ಯಾಷನ್ ಡಿಸೈನರ್ ಗಳು ಆಗುವ ಕನಸು ಕಂಡಿರುವ ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಹೊಸ ಉಡುಗೆಗಳನ್ನು ತಯಾರು ವಿನ್ಯಾಸ ಮಾಡಿದ್ದರು. ಆಧುನಿಕ, ಸಾಂಪ್ರದಾಯಿಕ ಶೈಲಿ ಸೇರಿದಂತೆ ಎಲ್ಲ ರೀತಿಯ ಉಡುಗೆಗಳು ಇಲ್ಲಿ ನೋಡಲು ಸಿಕ್ಕವು.
ಕೆಎಲ್ ಇ ಸಂಸ್ಥೆಯ ಅಂತಿಮ ವಿಭಾಗದ 28 ವಿದ್ಯಾರ್ಥಿಗಳು ಡಿಸೈನ್ ಮಾಡಿದ್ದ ಉಡುಗೆಗಳನ್ನು ಅದೇ ಕಾಲೇಜಿನ 130 ಮಾಡೆಲ್ ಗಳು ರಾಂಪ್ ವಾಕ್ ಮಾಡುವ ಮೂಲಕ ಅನಾವರಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.