ADVERTISEMENT

ತುಟಿಯ ಅಂದವೂ...ಆರೋಗ್ಯವೂ

​ಪ್ರಜಾವಾಣಿ ವಾರ್ತೆ
Published 25 ಮೇ 2024, 0:40 IST
Last Updated 25 ಮೇ 2024, 0:40 IST
   
ಅಂದದ ಮುಖಾರವಿಂದಕೆ ಅಂದದ ತುಟಿಗಳೇ ಸೋಪಾನ. ಒಡೆದ, ಶುಷ್ಕ, ಒಣ ತುಟಿಗಳ ಸಮಸ್ಯೆ ಇರುವವರಿಗೆ ಇಲ್ಲಿವೆ ಕೆಲ ಟಿಪ್ಸ್‌...

ಅಧರಂ ಮಧುರಂ ವದನಂ ಮಧುರಂ
ಅಧರ ಮಧುರವಾಗಿದ್ದರೆನೇ ಮುಖವೂ ಮಧುರ ಎಂದೂ ಇದನ್ನು ಅರ್ಥೈಸಿಕೊಳ್ಳಬಹುದು. ಒಣಗಿದ, ಒಡೆದ, ಕಪ್ಪಾದ ತುಟಿಗಳಿದ್ದರೆ ಮುಖದ ಅಂದವೇ ಮರೆಮಾಚುವುದು. ಒಡೆದ ತುಟಿಯಿಂದ ಮೇಕಪ್‌ ಕೂಡ ಸೊಗಸಾಗಿ ಕಾಣದು. ಮೊದಲು ತುಟಿಗಳ ಅಂದವನ್ನೂ, ಆರೋಗ್ಯವನ್ನೂ ಹೆಚ್ಚಿಕೊಳ್ಳುವತ್ತ ಗಮನ ಹರಿಸಬೇಕು.

ಮುಖ ಮತ್ತು ದೇಹದ ಚರ್ಮದಂತೆಯೇ ತುಟಿಗಳು ಕೂಡ ಸೂರ್ಯನ ಕಿರಣಗಳಿಗೆ ಬಾಡುತ್ತವೆ. ಕೈಕಾಲು, ಮುಖವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಸಾಕಷ್ಟು ಎಚ್ಚರಿಕೆ ವಹಿಸುವವರೂ ಕೆಲವೊಮ್ಮೆ ತುಟಿಗಳನ್ನು ಮರೆಯುತ್ತಾರೆ. ತುಟಿಗಳನ್ನು ಬಿಸಿಲಿನಿಂದ ರಕ್ಷಿಸಲು ಕನಿಷ್ಠ 15 SPF ಇರುವ ಸನ್‌ಸ್ಕ್ರೀನ್ ಬಳಸುವುದು ಬಹಳ ಮುಖ್ಯ.


ಮ್ಯಾಟ್‌ ಲಿಪ್‌ಸ್ಟಿಕ್‌: ಒಣ ತುಟಿ ಇರುವವರು ಮ್ಯಾಟ್ ಲಿಪ್‌ಸ್ಟಿಕ್‌ಗಳನ್ನು ಬಳಸದೇ ಇರುವುದು ಒಳ್ಳೆಯದು. ಇದೀಗ ಮ್ಯಾಟ್‌ ಲಿಪ್‌ಸ್ಟಿಕ್‌ಗಳೇ ಟ್ರೆಂಡ್‌ನಲ್ಲಿವೆ. ತುಟಿ ರಕ್ಷಿಸಲು ಲಿಪ್‌ಸ್ಟಿಕ್‌ಗೂ ಮೊದಲು ಹೈಡ್ರೇಟಿಂಗ್ ಪ್ರೈಮರ್‌ಗಳನ್ನು ಬಳಸಬಹುದು.

ADVERTISEMENT
  • ಲಿಪ್‌ ಸ್ಕ್ರಬ್‌: ಮಾರುಕಟ್ಟೆಯಲ್ಲಿ ಸಾಕಷ್ಟು ವಿಧಗಳ ಲಿಪ್‌ ಸ್ಕ್ರಬ್‌ಗಳು ಸಿಗುತ್ತವೆ. ಅವುಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿಕೊಳ್ಳುವ ಜವಾಬ್ದಾರಿ ನಿಮ್ಮದೇ. ಸಕ್ಕರೆಗೆ ಶೀಯಾ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ ತುಟಿಗಳನ್ನು ಸ್ಕ್ರಬ್‌ ಮಾಡಿಕೊಳ್ಳಬಹುದು. ಸ್ಟ್ರಾಬೆರಿ, ಬಾಳೆಹಣ್ಣು, ಆರೆಂಜ್‌, ಪುದಿನಾ, ಸೌತೆಕಾಯಿ, ಆಲೂಗಡ್ಡೆಯಂತಹ ಹಣ್ಣು ತರಕಾರಿಗಳನ್ನೂ ಸಹ ತುಟಿಗಳನ್ನು ಹೈಡ್ರೇಟ್‌ ಮಾಡಲು ಬಳಸಬಹುದು. ಕಣ್ಣಿನ ಮೇಲೆ ಸೌತೆಕಾಯಿ ಸ್ಲೈಸ್‌ಗಳನ್ನು ಇಡುವಂತೆಯೇ ತುಟಿಗಳ ಮಸಾಜ್‌ಗೂ ಸೌತೆ ಬಳಸಬಹುದು.

  • ಅಲೋವೆರಾ: ಅಲೋವೆರಾ ಅಥವಾ ಲೋಳೆಸರದ ಉಪಯೋಗವಂತೂ ತಿಳಿದೇ ಇದೆ. ಲೋಳೆಸರವನ್ನು ತುಟಿಗಳ ಆರೈಕೆಗೂ ಬಳಸಬಹುದು. .ಉರಿಯೂತದ ಗುಣಲಕ್ಷಣಗಳು ಮತ್ತು ಹಿತವಾದ ಪರಿಣಾಮವು ಒಡೆದ ತುಟಿಗಳಿಗೆ ಚಿಕಿತ್ಸೆ ನೀಡಲು ಉತ್ತಮ ಆಯ್ಕೆಯಾಗಿದೆ.

  • ಒಳಗಿನ ಆರೈಕೆ: ತುಟಿಗಳ ಅಂದ ಅಡಗಿರುವುದು ಬರೀ ಮೇಲಿನ ಆರೈಕೆಯಲ್ಲಿ ಅಲ್ಲ. ಒಳಗಿನಿಂದಲೂ ನೀವು ಆರೋಗ್ಯವಾಗಿದ್ದಾಗ ಮಾತ್ರ ಅಧರಗಳ ಅಂದ ಹೆಚ್ಚುವುದು. ಹೀಗಾಗಿ, ಸಾಕಷ್ಟು ನೀರು, ಜ್ಯೂಸ್‌ ಕುಡಿಯುವುದನ್ನು ರೂಢಿಸಿಕೊಳ್ಳಿ. ತರಕಾರಿ ಹಾಗೂ ಸೊಪ್ಪಿನ ಸೇವನೆ ಅಧಿಕವಾಗಿರಲಿ.

ಈ ಮೇಲಿನ ಮನೆಮದ್ದು ಹಾಗೂ ಆರೈಕೆಯಿಂದ ಒಡೆದ/ಒಣಗಿದ ತುಟಿಗಳ ಸಮಸ್ಯೆಗೆ ಮುಕ್ತಿ ಸಿಗಬಹುದು. ಒಂದು ವೇಳೆ ಇಷ್ಟೆಲ್ಲಾ ಮಾಡಿಯೂ ತುಟಿಗಳ ಸಮಸ್ಯೆ ಮುಂದುವರೆದರೆ ಚರ್ಮರೋಗ ವೈದ್ಯರನ್ನು ಭೇಟಿಯಾಗಬೇಕು. ಕೆಲವೊಮ್ಮೆ ಒಣ ಹವಾಮಾನದ ಹೊರತಾಗಿ ಬೇರೆ ಆರೋಗ್ಯ ತೊಡಕುಗಳ ಪರಿಣಾಮವೂ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿರುವ ಸಾಧ್ಯತೆ ಇರುತ್ತದೆ. ಅಲರ್ಜಿ, ಯೀಸ್ಟ್ ಸೋಂಕು ಅಥವಾ ಇತರೆ ಸಮಸ್ಯೆಗಳು ಶುಷ್ಕ, ಕಳಾಹೀನ, ಒಡೆದ ತುಟಿಗಳಿಗೆ ಕಾರಣವಾಗಿರಬಹುದು. ಇದನ್ನು ಚರ್ಮರೋಗ ವೈದ್ಯರು ನಿರ್ಧರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.