ಸನ್‌ಗ್ಲಾಸ್ ಹಾಕಿಕೊಂಡು ಫೋಟೊಗೆ ಪೋಸು ಕೊಡುವುದು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು; ಹೆಂಗಳೆಯರೂ ಇದನ್ನು ಇಷ್ಟಪಡುತ್ತಾರೆ. ಕಣ್ಣಿಗೆ ತಂಪು ನೀಡುವ ಸನ್‌ಗ್ಲಾಸ್ ನಮಗೆ ಸ್ಟೈಲಿಶ್ ಲುಕ್ ಕೊಡುತ್ತದೆ. ಪಾಶ್ಚಾತ್ಯ ಉಡುಪುಗಳೊಂದಿಗೆ ಸನ್‌ಗ್ಲಾಸ್ ಹೆಚ್ಚು ಒಗ್ಗುತ್ತದೆ. ಸನ್‌ಗ್ಲಾಸ್‌ನಲ್ಲಿ ಹಲವು ವಿಧಗಳಿವೆ. ರಸ್ತೆಬದಿಯಲ್ಲಿ ಸಿಗುವ ಗ್ಲಾಸ್‌ನಿಂದ ಹಿಡಿದು ಲಕ್ಷಗಟ್ಟಲೆ ಬೆಳೆ ಬಾಳುವ ಬ್ರ್ಯಾಂಡೆಡ್‌ನ ಸನ್‌ಗ್ಲಾಸ್‌ವರೆಗೂ ಮಾರುಕಟ್ಟೆಯಲ್ಲಿ ಲಭ್ಯ. ಆದರೆ ನಮಗೆ ಹೊಂದುವ ಸನ್‌ಗ್ಲಾಸ್ ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ಮಹಿಳೆಯರಿಗಾಗಿ ಹಲವು ಶೇಡ್‌ನ ಸನ್‌ಗ್ಲಾಸ್‌ಗಳು ಲಭ್ಯವಿವೆ. ಗ್ಲಾಸ್ ಹಾಕಿಕೊಂಡು, ಫೋಟೊಗಳನ್ನು ಬೇರೆ ಬೇರೆ ಪೋಸುಗಳಲ್ಲಿ ತೆಗೆಸಿಕೊಂಡು ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ತುಂಬಾ ತುಂಬಿಸಿಕೊಳ್ಳಬಹುದು.
ಬ್ರಂಚ್ ಡೇಟ್‌ಗೆ
ನೀವು ಬ್ರಂಚ್ ಡೇಟ್‌ಗೆ ಹೊರಟಿದ್ದೀರಾ? ಹೋಗುವಾಗ ರೌಂಡ್ ಶೇಪ್‌ನ ಸನ್‌ಗ್ಲಾಸ್ ಹಾಕಿಕೊಳ್ಳಿ, ನಿಮ್ಮ ಲುಕ್ ತುಂಬಾ ಚೆನ್ನಾಗಿರುತ್ತದೆ. ಬಿಳಿ ಕ್ರಾಪ್ ಟಾಪ್ ಮತ್ತು ಜೀನ್ಸ್ ಹಾಕಿಕೊಂಡು ರೌಂಡ್ ಸನ್‌ಗ್ಲಾಸ್ ಹಾಕಿಕೊಂಡರೆ ನಿಮ್ಮ ಬ್ರಂಚ್ ಡೇಟ್ ಅನ್ನು ಇನ್ನಷ್ಟು ಉತ್ತಮವಾಗಿ ಸಬಹುದು.
ಬೀಚ್ ಲುಕ್‌ಗೆ
ಕಡಲತೀರದ ಪ್ರವಾಸಕ್ಕೆಮಹಿಳೆಯರಿಗೆ ಬೋಲ್ಡ್ ಕ್ಯಾಟ್‌ಐ ಶೇಡ್ಸ್ ಸನ್‌ಗ್ಲಾಸ್‌ಗಳು ಬಹಳ ಒಪ್ಪುತ್ತವೆ. ಕ್ಯಾಶುವಲ್ಸ್ ಮತ್ತು ಫಾರ್ಮಲ್ ಔಟ್‌ಫಿಟ್‌ಗೂ ಇದು ಹೇಳಿ ಮಾಡಿಸಿದಂತೆ ಕಾಣುತ್ತದೆ.
ದಿನ ನಿತ್ಯದ ಬಳಕೆಗೆ
ಸ್ಲೀಕ್, ಬ್ಯಾಡ್‌ಆ್ಯಸ್ ಸನ್‌ಗ್ಲಾಸ್‌ಗಳು ನಿತ್ಯದ ಬಳಕೆಯಲ್ಲಿ ಸ್ಟೈಲಿಶ್ ಆಗಿ ಕಾಣಲು ಉತ್ತಮವಾಗಿದೆ. ಇದು ನಿಮ್ಮನ್ನು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಸೆಲ್ಫಿಗಳಲ್ಲಿ ಸ್ಟೈಲಿಶ್ ಆಗಿ ಕಾಣುವಿರಿ. ಟಿ ಶರ್ಟ್, ಜೀನ್ಸ್‌ಗಳ ಜೊತೆ, ಕ್ಯಾಶುವಲ್ ಔಟ್‌ಫಿಟ್‌ಗೆ ಇದು ಬಹಳ ಚೆನ್ನಾಗಿ ಒಪ್ಪುತ್ತದೆ.
ಕೆಲವು ಸನ್‌ಗ್ಲಾಸ್‌ಗಳು ಎಲ್ಲಾ ಮೂಡಿಗೂ, ಎಲ್ಲಾ ರೀತಿಯ ಔಟ್‌ಫಿಟ್‌ಗೂ ಹೊಂದುತ್ತದೆ. ಇದು ಎಲ್ಲಾ ಬ್ರ್ಯಾಂಡ್‌ಗಳಲ್ಲೂ ಲಭ್ಯ. ಈ ಗ್ಲಾಸ್‌ಗಳು ಫ್ಯಾನ್ಸಿ ಲುಕ್ ನೀಡುತ್ತವೆ. ಬೋಲ್ಡ್ ಜೋಡಿಯ ಗ್ಲಾಸಸ್‌ಗಳು ಮಹಿಳೆಯರಿಗೆ ನಿತ್ಯದ ಬಳಕೆಗೆ ಬೋಲ್ಡ್ ಲುಕ್ ನೀಡುತ್ತದೆ. ಭಾರತದ ಸಾಂಪ್ರದಾಯಿಕ ಔಟ್‌ಫಿಟ್‌ಗೂ ಈ ಗ್ಲಾಸ್‌ಗಳು ಒಪ್ಪುತ್ತವೆ.
ಖರೀದಿ ಹೇಗೆ?
ಔಟ್‌ಫಿಟ್‌ಗೆ ಹೊಂದುವಂತಹ ಸನ್‌ಗ್ಲಾಸ್ ಅನ್ನು ಖರೀದಿ ಮಾಡಬಹುದು. ಖರೀದಿಗೆ ಯಾವ ಸಂದರ್ಭ ಸೂಕ್ತ ಎನ್ನುವುದು ಮುಖ್ಯವಾಗುತ್ತದೆ ಅಥವಾ ಮೂಡ್‌ನ ಮೇಲೆ ಖರೀದಿ ಮಾಡಬಹುದು.
ಫೋಟೊಗೆ ಪೋಸು ಕೊಡುವುದು, ಪಾರ್ಟಿಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ, ಯುವಿ ಕಿರಣಗಳಿಂದಲೂ ರಕ್ಷಣೆ ಪಡೆಯುವ ದೃಷ್ಟಿಯಿಂದಲೂ ಸನ್‌ಗ್ಲಾಸ್ ಪ್ರಾಮುಖ್ಯವಾಗಿದೆ. ಯಾವ ಯಾವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಯಾವ ಯಾವ ರೀತಿ ಸನ್‌ಗ್ಲಾಸ್ ಖರೀದಿ ಮಾಡಬಹುದು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.