ADVERTISEMENT

ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್‌ಗೆ ಮಿಸ್‌ ಇಂಡಿಯಾ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2024, 8:06 IST
Last Updated 17 ಅಕ್ಟೋಬರ್ 2024, 8:06 IST
<div class="paragraphs"><p>ನಿಕಿತಾ ಪೋರ್ವಾಲ್</p></div>

ನಿಕಿತಾ ಪೋರ್ವಾಲ್

   

ಚಿತ್ರಕೃಪೆ: ಇನ್‌ಸ್ಟಾಗ್ರಾಂ

ಮುಂಬೈ: 2024ರ ಫೆಮಿನಾ ಮಿಸ್‌ ಇಂಡಿಯಾ ಕಿರೀಟವನ್ನು ಮಧ್ಯಪ್ರದೇಶದ 19 ವರ್ಷದ ನಿಕಿತಾ ಪೋರ್ವಾಲ್ ಅವರು ಮುಡಿಗೇರಿಸಿಕೊಂಡಿದ್ದಾರೆ.

ADVERTISEMENT

ಮಿಸ್‌ ಇಂಡಿಯಾ–2023ರ ವಿಜೇತೆ ನಂದಿನಿ ಗುಪ್ತಾ ಅವರು ನಿಕಿತಾ ಅವರಿಗೆ ಕಿರೀಟ ತೊಡಿಸಿದರು. ಮಿಸ್‌ ವರ್ಲ್ಡ್‌ ಸ್ಪರ್ಧೆಯ ಮುಂದಿನ ಆವೃತಿಯಲ್ಲಿ ನಿಕಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿಯ ರೇಖಾ ಪಾಂಡೆ ಮತ್ತು ಗುಜರಾತ್‌ನ ಆಯುಷಿ ಧೋಲಾಕಿಯಾ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಸ್ಪರ್ಧಿ ಸಂಗೀತಾ ಬಿಜ್ಲಾನಿ, ನಿಕಿತಾ ಮಹೈಸಲ್ಕರ್, ಅನೀಸ್ ಬಾಜ್ಮಿ, ನೇಹಾ ಧೂಪಿಯಾ, ಬಾಸ್ಕೋ ಮಾರ್ಟಿಸ್ ಮತ್ತು ಮಧುರ್ ಭಂಡಾರ್ಕರ್ ಇದ್ದರು.

ಮಿಸ್‌ ಇಂಡಿಯಾ 2024ರ ಅಂತಿಮ ಸುತ್ತಿನ ಸ್ಪರ್ಧೆಯು ಮುಂಬೈನಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.