ಬೆಂಗಳೂರು: ವರ್ಣರಂಜಿತ ಸಮಾರಂಭ.. ಕಾತರದಿಂದ ಕಾಯುತ್ತಿದ್ದ 50ಕ್ಕೂ ಅಧಿಕ ಸ್ಪರ್ಧಿಗಳು.. ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಜೇತರ ಹೆಸರು ಘೋಷಣೆ..
ಅಷ್ಟರಲ್ಲಿ ಸ್ಪರ್ಧೆಯ ತೀರ್ಪುಗಾರರು ಈ ಬಾರಿಯ ಮಿಸ್ ಯುನಿವರ್ಸ್ ಎಂದು ಹೇಳಿ ಅರೆಕ್ಷಣ ಮಾತು ನಿಲ್ಲಿಸಿದರು.
ಬಳಿಕ ಒಮ್ಮೆಲೇ ಇಂಡಿಯಾ.. ಎಂದಾಗ ಅಲ್ಲಿ ಕರತಾಡನ.. ಭಾರತದ ಸ್ಪರ್ಧಿ ಹರ್ನಾಜ್ ಕೌರ್ ಸಂಧು ಒಂದು ಕ್ಷಣ ತನ್ನ ಕಿವಿಗಳನ್ನೇ ನಂಬದಾದರು.. ಆ ಸನ್ನಿವೇಶಕ್ಕೆ ಪ್ರತಿಕ್ರಿಯೆ ನೀಡಲು ಅವರಿಗೆ ಕೆಲವು ಸೆಕೆಂಡ್‌ಗಳು ಬೇಕಾಯಿತು..
ವಿಜೇತೆ ತಾವೆಂದು ಘೋಷಣೆಯಾಗುತ್ತಲೇ ಅವರ ಕಣ್ಣಿನಿಂದ ಆನಂದಬಾಷ್ಪ ಹರಿಯಿತು. ಅಲ್ಲದೆ, ಸಹಸ್ಪರ್ಧಿಯನ್ನು ತಬ್ಬಿಕೊಂಡು ಖುಷಿಯನ್ನು ವ್ಯಕ್ತಪಡಿಸಿದರು.
ಈ ಎಲ್ಲ ಕ್ಷಣಗಳು ಅಲ್ಲಿದ್ದ ಕ್ಯಾಮೆರಾಗಳಲ್ಲಿ ಸೆರೆಯಾದವು. 70ನೇ ಮಿಸ್ ಯುನಿವರ್ಸ್ ಆಗಿ 21ರ ಹರೆಯದ ಹರ್ನಾಜ್ ಕೌರ್ ಸಂಧು ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.
ಅಲ್ಲದೆ, 21 ವರ್ಷಗಳ ಬಳಿಕ ಭಾರತಕ್ಕೆ ಕಿರೀಟ ದೊರೆತಿದೆ. ಜತೆಗೆ 2021ರಲ್ಲಿ 21 ವರ್ಷದ ಬಳಿಕ, 21ರ ಯುವತಿಗೆ ಭುವನ ಸುಂದರಿ ಕಿರೀಟದ ಗೌರವ ದೊರೆತಿರುವುದು ಕೂಡ ಕಾಕತಾಳೀಯ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.