ಅಪರೂಪದ ಲೋಹ ಪ್ಲಾಟಿನಂ ಆಭರಣಪ್ರಿಯರ ವಿಶಿಷ್ಟ ಆಯ್ಕೆ. ತೆಳುತನ ಮತ್ತು ದೀರ್ಘಬಾಳಿಕೆಯಿಂದ ಪ್ಲಾಟಿನಂ ಮನಸ್ಸನ್ನು ಆಕರ್ಷಿಸುತ್ತದೆ.
ತೆಳುವಾದ ಚೈನ್, ರಿಸ್ಟ್ ವೇರ್, ರಿಂಗ್‌ನಂಥ ಆಭರಣಗಳೆಲ್ಲವೂ ಆಧುನಿಕ ವಿನ್ಯಾಸಗಳಲ್ಲಿವೆ. ‘ಮೆನ್ ಆಫ್ ಪ್ಲಾಟಿನಂ’ ಸಂಗ್ರಹವು ಅತ್ಯಾಧುನಿಕ ಕುಸುರಿಗೆ ಹೆಸರುವಾಸಿಯಾಗಿದೆ.
ಈ ಸಂಗ್ರಹದಲ್ಲಿರುವ ಪ್ಲಾಟಿನಂ ಚೈನ್ ಸೂಕ್ಷ್ಮಕೆತ್ತನೆಯ ದ್ಯೋತಕವಾಗಿದೆ. ನಿಖರ ಗೆರೆಗಳ ಮಿನಿಮಲಿಸ್ಟ್ ಚೈನ್ ಅಥವಾ ಟು-ಟೋನ್ಡ್ ಆಭರಣವು ರೋಸ್ ಗೋಲ್ಡ್‌ನೊಂದಿಗೆ ಇವೆ. ಇವು ಜೆರ್ಸೀಗಳು, ಪೋಲೋ ಟೀ–ಶರ್ಟ್‌ಗಳು ಮತ್ತು ಡೆನಿಮ್ ದಿರಿಸಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.