ADVERTISEMENT

ಭುವನ ಸುಂದರಿಯ ಯಶಸ್ಸಿನ ಹಿಂದಿದ್ದಾರೆ ತೃತೀಯ ಲಿಂಗಿ ಸಾಯಿಶಾ ಶಿಂಧೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 6:41 IST
Last Updated 16 ಡಿಸೆಂಬರ್ 2021, 6:41 IST
ವಸ್ತ್ರ ವಿನ್ಯಾಸಕರಾಗಿರುವ ಸಾಯಿಶಾ ಶಿಂಧೆ
ವಸ್ತ್ರ ವಿನ್ಯಾಸಕರಾಗಿರುವ ಸಾಯಿಶಾ ಶಿಂಧೆ   

ಬೆಂಗಳೂರು: ಭಾರತಕ್ಕೆ 21 ವರ್ಷಗಳ ಬಳಿಕ ಭುವನ ಸುಂದರಿ ಕಿರೀಟ ದೊರೆತಿರುವುದು ಎಲ್ಲರಿಗೂ ತಿಳಿದ ವಿಚಾರ. ಚಂಡೀಗಡ ಮೂಲದ 21ರ ಯುವತಿ ಹರ್ನಾಜ್ ಕೌರ್ ಸಂಧು ಭುವನ ಸುಂದರಿ ಕಿರೀಟ ಧರಿಸಿ ಮಿಂಚಿದ್ದಾರೆ.

ಹರ್ನಾಜ್ ಸಂಧು, ಭುವನ ಸುಂದರಿ ಕಿರೀಟ ತೊಡುವಾಗ ಅವರು ಧರಿಸಿದ್ದ ಗೌನ್ ಎಲ್ಲರ ಗಮನ ಸೆಳೆದಿತ್ತು. ಅದನ್ನು ವಿನ್ಯಾಸ ಮಾಡಿರುವುದು ಮುಂಬೈ ಮೂಲದ ವಸ್ತ್ರ ವಿನ್ಯಾಸಕರಾಗಿರುವ ಸಾಯಿಶಾ ಶಿಂಧೆ ಎಂಬ ತೃತೀಯ ಲಿಂಗಿ.

ಸ್ವಪ್ನಿಲ್ ಶಿಂಧೆ ಆಗಿದ್ದ ಅವರು, ಮುಂದೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ತಮ್ಮ ಹೆಸರನ್ನು ಸಾಯಿಶಾ ಶಿಂಧೆ ಎಂದು ಬದಲಾಯಿಸಿಕೊಂಡಿದ್ದಾರೆ.

ADVERTISEMENT

ಬಾಲಿವುಡ್ ನಟಿಯರಿಗೆ, ಸೆಲೆಬ್ರಿಟಿಗಳಿಗೆ ಸಾಯಿಶಾ ವಿವಿಧ ರೀತಿಯ ಉಡುಪುಗಳನ್ನು ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಭುವನ ಸುಂದರಿ ಹರ್ನಾಜ್ ಅವರಿಗೂ ಸಾಯಿಶಾ ವಿಶೇಷ ಗೌನ್ ವಿನ್ಯಾಸ ಮಾಡಿರುವುದಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ವಿಚಾರವನ್ನು ಸಾಯಿಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಹರ್ನಾಜ್‌ಗೆ ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.