ADVERTISEMENT

Miss Universe 2021 | ಯಾರಿವರು ಭುವನ ಸುಂದರಿ ಹರ್ನಾಜ್ ಕೌರ್ ಸಂಧು?

21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:37 IST
Last Updated 13 ಡಿಸೆಂಬರ್ 2021, 6:37 IST
21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.
21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಕಿರೀಟ ದೊರೆತಿದ್ದು, ಚೆಲುವೆ ಹರ್ನಾಜ್ ಸಂಧು ಕೌರ್ ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.   
ಚಂಡೀಗಡದ ಸಿಖ್ ಕುಟುಂಬದಲ್ಲಿ ಜನಿಸಿದ ಸಂಧು, ಪ್ರಾಥಮಿಕ ಶಿಕ್ಷಣವನ್ನು ಚಂಡೀಗಡದಲ್ಲೇ ಪೂರೈಸಿದರು.
ಹರ್ನಾಜ್ ಅವರು ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ.
2017ರಲ್ಲೇ ಮಿಸ್ ಚಂಡೀಗಡ ವಿಜೇತೆಯಾಗಿದ್ದ ಹರ್ನಾಜ್ ಕೌರ್.
2018ರಲ್ಲಿ ಹರ್ನಾಜ್ ಅವರು ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡಿದ್ದರು.
2019ರಲ್ಲಿ ಫೆಮಿನಾ ಮಿಸ್ ಇಂಡಿಯ ಪ್ರಶಸ್ತಿ ಪಡೆದುಕೊಂಡಿದ್ದರು ಹರ್ನಾಜ್
2021ರಲ್ಲಿ ಮಿಸ್ ದಿವಾ ಪ್ರಶಸ್ತಿಯಲ್ಲಿ ಹಲವು ಕಿರೀಟವನ್ನು ಗಳಿಸಿದ್ದರು ಕೌರ್
ಇಸ್ರೇಲ್‌ನ ಎಲಿಯಟ್‌ನಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಹರ್ನಾಜ್ ಅವರು ಭುವನ ಸುಂದರಿ ಕಿರೀಟವನ್ನು ತನ್ನದಾಗಿಸಿಕೊಂಡರು.
ಮಿಸ್ ಯುನಿವರ್ಸ್ ಕಿರೀಟ ಗಳಿಸಿದ ಬೆನ್ನಲ್ಲೇ ಹರ್ನಾಜ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನ್ಯೂಯಾರ್ಕ್‌ನಲ್ಲಿ ನೆಲೆಸಲಿದ್ದಾರೆ.
ಭುವನ ಸುಂದರಿ ಕಿರೀಟ ಪಡೆದ ಮೂರನೇ ಭಾರತೀಯಳಾಗಿದ್ದಾರೆ ಹರ್ನಾಜ್ ಕೌರ್ ಸಂಧು. ಈ ಮೊದಲು ಸುಶ್ಮಿತಾ ಸೇನ್ ಮತ್ತು ಲಾರಾ ದತ್ತ ಮಿಸ್ ಯುನಿವರ್ಸ್ ಕಿರೀಟ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.