ADVERTISEMENT

ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಪವಿತ್ರಾ ಭಟ್
Published 6 ಸೆಪ್ಟೆಂಬರ್ 2024, 23:30 IST
Last Updated 6 ಸೆಪ್ಟೆಂಬರ್ 2024, 23:30 IST
ಶರಾರ ಪ್ಯಾಂಟ್‌
ಶರಾರ ಪ್ಯಾಂಟ್‌   

ಚೂಡಿದಾರ್‌, ಕುರ್ತಾ- ಪ್ಯಾಂಟ್‌ಗಳು ಎಂದಿಗೂ ಮಾಸದ ಫ್ಯಾಷನ್‌. ದಿನನಿತ್ಯದ ಉಡುಗೆಯಿಂದ ಹಿಡಿದು, ವಿಶೇಷ ಸಂದರ್ಭಗಳಲ್ಲೂ ಸಾಂಪ್ರದಾಯಿಕ ಉಡುಗೆಯಾಗಿಯೇ ಕುರ್ತಾ- ಪ್ಯಾಂಟ್‌ಗಳು ಹಾಸುಹೊಕ್ಕಾಗಿವೆ. ಈಗಂತೂ ಕುರ್ತಾಗೆ ಮ್ಯಾಚ್‌ ಆಗುವ ಪ್ಯಾಂಟ್‌, ದುಪ್ಪಟ್ಟಾ ಧರಿಸುವ ಕಾಲ ಹೋಯಿತು. ಏನಿದ್ದರೂ ಕಾಂಟ್ರಾಸ್ಟ್‌ ಯುಗ. ಒಂದೇ ಕುರ್ತಾಗೆ ವಿವಿಧ ರೀತಿಯ ಪ್ಯಾಂಟ್‌ ಧರಿಸಬಹುದು. ತೀರಾ ಬಿಗಿಯಾದ ಪ್ಯಾಂಟ್‌ಗಳನ್ನು ಇಷ್ಟಪಡದವರಿಗೆ ಸಡಿಲವಾದ ಪ್ಯಾಂಟ್‌ಗಳು ಪ್ರಿಯವಾಗುತ್ತವೆ.

ಶರಾರ ಪ್ಯಾಂಟ್‌
ಪೂರ್ತಿಯಾಗಿ ಪ್ಯಾಂಟ್‌ ಅಲ್ಲದ, ಇತ್ತ ಪೂರ್ತಿ ಲಂಗವೂ ಅಲ್ಲದ ಶರಾರಾ, ಕುರ್ತಾ- ದುಪ್ಪಟ್ಟಾ ಜತೆ ತೊಡಬಹುದು. ಮಂಡಿಯವರೆಗೆ ಪ್ಯಾಂಟನ್ನೇ ಹೋಲುವ ಈ ಶರಾರ ಮಂಡಿಯಿಂದ ಕೆಳಗೆ ಕೊಡೆಯ ಹಾಗೆ ತೆರೆದುಕೊಳ್ಳುತ್ತದೆ. ಎಲ್ಲಾ ಬಣ್ಣಗಳಲ್ಲಿ, ಡಿಸೈನ್‌ಗಳಿರುವ ಶರಾರ ಪ್ಯಾಂಟ್‌ಗಳು ಸಿಗುತ್ತವೆ. ನಿಮಗಿಷ್ಟವಾಗುವ, ಶರಾರಾಗೆ ಸರಿಹೊಂದುವ ಯಾವುದೇ ಕುರ್ತಾ ಧರಿಸಿ ಇದರ ಜೆತೆಗೆ ಒಂದು ದುಪ್ಪಟ್ಟಾ ತೊಟ್ಟರೆ ಪರಿಪೂರ್ಣ ಲುಕ್‌ ನಿಮ್ಮದಾಗುತ್ತದೆ.

ಪಲಾಜೊ ಪ್ಯಾಂಟ್‌
ಪಲಾಜೊದಲ್ಲಿ ಹಲವು ವಿಧಗಳಿವೆ. ಧರಿಸಲು ಅರಾಮವಾಗುವ ಈ ಪ್ಯಾಂಟ್‌ಗಳು ಬಹುತೇಕ ಎಲ್ಲಾ ರೀತಿಯ ಕುರ್ತಾಗಳಿಗೆ ಸರಿಹೊಂದುತ್ತವೆ. ಬಿಗಿಯಾದ ಪ್ಯಾಂಟ್‌ ಧರಿಸದವರೊಗೆ ಪಲಾಜೊ ಪ್ಯಾಂಟ್‌ಗಳು ಉತ್ತಮ. ಸ್ಟ್ರೇಟ್‌ ಲೈನ್‌ ಕುರ್ತಾ, ಅನಾರ್ಕಲಿ ಕುರ್ತಾ, ಎ ಲೈನ್‌ ಕುರ್ತಾ ಹೀಗೆ ಎಲ್ಲ‌ ಬಗೆಯ ಕುರ್ತಾಗಳಿಗೂ ಸುಲಭವಾಗಿ ಮ್ಯಾಚ್‌ ಆಗುತ್ತದೆ. ವಿವಿಧ ವಿನ್ಯಾಸದ, ವಿವಿಧ ಬಣ್ಣಗಳ ಪಲಾಜೊ ಪ್ಯಾಂಟ್‌ಗಳು ಉಡುಗೆಗೆ ವಿಭಿನ್ನ ಲುಕ್ ನೀಡಬಲ್ಲದು.

ADVERTISEMENT

ದೋತಿ ಪ್ಯಾಂಟ್‌
ಸಿಂಪಲ್‌ ಕುರ್ತಾಗಳಿಗೂ ರಿಚ್ ಲುಕ್‌ ನೀಡುವಲ್ಲಿ ದೋತಿ ಪ್ಯಾಂಟ್‌ಗಳು ನೆರವಾಗುತ್ತವೆ. ಉದ್ದನೆಯ ಟೀ ಶರ್ಟ್‌, ಶಾರ್ಟ್‌ ಕುರ್ತಾ, ಫ್ರಾಕ್‌ ಕುರ್ತಾಗಳಿಗೆ ದೋತಿ ಪ್ಯಾಂಟ್‌ಗಳು ಮ್ಯಾಚ್‌ ಆಗುತ್ತವೆ. ಗೆಟ್‌ ಟುಗೇದರ್‌, ಕಿಟ್ಟಿ ಪಾರ್ಟಿಗಳಿಗೆ ದೋತಿ ಪ್ಯಾಂಟ್‌ನೊಂದಿಗೆ ಮಿಕ್ಸ್‌ ಮ್ಯಾಚ್ ಮಾಡಿ ಧರಿಸಬಹುದು.

ಸ್ಕರ್ಟ್‌
ಕುರ್ತಾಗಳೊಂದಿಗೆ ಸ್ಕರ್ಟ್‌ ಧರಿಸುವುದು ಸಾಂಪ್ರದಾಯಿಕ್‌ ಲುಕ್‌ ನೀಡುತ್ತದೆ. ಕಾಂಟ್ರಾಸ್ಟ್‌ ಕಲರ್‌ಗಳ ಸ್ಕರ್ಟ್‌ನೊಂದಿಗೆ ಲಾಂಗ್‌ ಕುರ್ತಾ ಧರಿಸುವುದರಿಂದ ಡಿಫರೆಂಟ್‌ ಲುಕ್‌ ನೀಡುತ್ತದೆ. ಮದುವೆ, ಸಮಾರಂಭಗಳಿಗೆ ಈ ಉಡುಗೆ ಹೇಳಿ ಮಾಡಿಸಿದ್ದು. ಕಟ್‌ ಕುರ್ತಾ, ಅನಾರ್ಕಲಿ ಕುರ್ತಾ, ಲಾಂಗ್‌ ಸ್ಲೀವ್‌ ಮತ್ತು ಶಾರ್ಟ್‌ ಸ್ಲೀವ್‌ ಕುರ್ತಾಗಳಿಗೂ ಸ್ಕರ್ಟ್‌ಗಳು ಸೂಟ್‌ ಆಗುತ್ತವೆ.

ಪ್ಯಾರಲಲ್‌ ಪ್ಯಾಂಟ್‌
ಮೇಲಿಂದ ಕೆಳಗಿನವರೆಗೆ ಒಂದೇ ಅಳತೆಯಿರುವ ಈ ಪ್ಯಾರಲಲ್‌ ಪ್ಯಾಂಟ್‌ಗಳು ಶಾರ್ಟ್ ಕುರ್ತಾಗಳೊಂದಿಗೆ ಮ್ಯಾಚ್‌ ಆಗುತ್ತವೆ. ವಿವಿಧ ಬಣ್ಣ, ಡಿಸೈನ್‌ಗಳಲ್ಲಿ ದೊರೆಯವ ಪ್ಯಾಂಟ್‌ ಅನ್ನು ಸ್ಟ್ರೇಟ್ ಕುರ್ತಾಗಳೊಂದಿಗೆ ಧರಿಸಬಹುದು. ಜೀನ್ಸ್‌ ಬಟ್ಟೆಯಲ್ಲೂ ಈ ಪ್ಯಾಂಟ್‌ ಸಿಗುತ್ತದೆ. ಹೀಗಾಗಿ ಕ್ರಾಪ್‌ಟಾಪ್‌ಗಳೊಂದಿಗೂ ಧರಿಸಬಹುದು.

ಸಿಗರೇಟ್‌ ಕಟ್‌ ಪ್ಯಾಂಟ್‌
ನೇರ ವಿನ್ಯಾಸ, ಕಾಲಿಗೆ ಅಂಟಿಕೊಳ್ಳುವ ಹಾಗೂ ಪ್ಯಾಂಟ್‌ಗೆ ಜೇಬುಗಳಿರುವ ಈ ಸಿಗರೇಟ್‌ ಕಟ್ ಪ್ಯಾಂಟ್‌ ಈಗಿನ ಟ್ರೆಂಡ್‌ ಲಾಂಗ್‌ ಕುರ್ತಾ, ಸೈಡ್‌ ಕಟ್‌, ಲೇಯರ್‌ ಕುರ್ತಾಗಳಿಗೆ ಈ ಸಿಗರೇಟ್‌ ಕಟ್‌ ಪ್ಯಾಂಟ್‌ ಸ್ಟೈಲಿಷ್‌ ಆಗಿ ಕಾಣುವಂತೆ ಮಾಡುತ್ತದೆ. ವಿವಿಧ ಬಣ್ಣಗಳಲ್ಲಿ ಹಾಗೂ ವಿನ್ಯಾಸಗಳಲ್ಲಿ ಈ ಪ್ಯಾಂಟ್‌ ದೊರೆಯುತ್ತದೆ. ಕಚೇರಿಗಳಿಗೆ, ಪಾರ್ಟಿ ವೇರ್‌ಗಳಿಗೂ ಈ ಪ್ಯಾಂಟ್‌ ಧರಿಸಬಹುದು.

ಪಲಾಜೋ ಪ್ಯಾಂಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.