ಮಕ್ಕಳಿಗಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು: ಆರೋಗ್ಯಕರ ಟಿಫಿನ್ ಇನಿಶಿಯೇಟಿವ್
ಇಂದಿನ ಬೇಗನೆಯ ಲೋಕದಲ್ಲಿ, ನಮ್ಮ ಮಕ್ಕಳಿಗೆ ಆರೋಗ್ಯಕರ ಮತ್ತು ರುಚಿಕರವಾದ ಭೋಜನವನ್ನು ತಂದುಕೊಡುವುದು ಹೊರಗಿನಿಂದ ಸಿದ್ಧಪಡಿಸಲು ಕಠಿಣ ವಾಗಿದೆ. ಆರೋಗ್ಯ ಮತ್ತು ರುಚಿಯ ಸಮತೋಲನಕ್ಕೆ ಹೋರಾಟ ಪೋಷಕರಿಗೆ ಹಾಗೂ ವಿಶೇಷವಾಗಿ ತಾಯಂದಿರಿಗೆ ದೀರ್ಘಕಾಲದ ಸಮಸ್ಯೆಯಾಗಿದೆ. ಆದರೆ ಇದರಿಂದ ಪಾರಾಗಲು ಪರಿಹಾರ ವಾಗಿದೆ - ಆರೋಗ್ಯಕರ ಟಿಫಿನ್ ಯೋಜನೆ.
ಆರೋಗ್ಯಕರ ಆಹಾರವು ಆರೋಗ್ಯಕರ ಮಕ್ಕಳನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಆರೋಗ್ಯ ಮತ್ತು ರುಚಿ ಸಾಮಾನ್ಯವಾಗಿ ಹೊಂದಿಕೆಯಾಗುವುದಿಲ್ಲ. ಇದು ತಾಯಂದಿರು ಪರಿಹರಿಸಲು ಪ್ರಯತ್ನಿಸುತ್ತಿರುವ ದೀರ್ಘಕಾಲಿಕ ಸಮಸ್ಯೆಯಾಗಿದೆ. ಬರಿಯ ಆರೋಗ್ಯಕರ ಆಹಾರವನ್ನು ನೀಡುವುದರೊಂದಿಗೆ ಮಾತ್ರ ಇದು ಕೊನೆಗೊಳ್ಳುವುದಿಲ್ಲ. ಅದನ್ನು ಸ್ಯಾನಿಟೈಜ್ ಮಾಡಿದ ಟಿಫಿನ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡುವುದು ಕೂಡ ಮುಖ್ಯವಾಗಿದೆ. ಆ್ಯಂಟಿಬ್ಯಾಕ್ಟೇರಿಯಲ್ ಎಕ್ಸೋ ಕೇವಲ ಸ್ವಚ್ಛಗೊಳಿಸುವುದು ಮಾತ್ರವಲ್ಲದೆ, 19 ನಿಮಿಷಗಳಲ್ಲಿ ತೊಳೆಯದ ಪಾತ್ರೆಗಳ ಮೇಲೆ 700% ರಷ್ಟು ಬೆಳೆಯುವ ಬ್ಯಾಕ್ಟಿರಿಯಾಗಳನ್ನು ಸಹ ಕೊಲ್ಲುತ್ತದೆ ಮತ್ತು ಲಂಚ್ ಬಾಕ್ಸ್ ಅನ್ನು ಸ್ಯಾನಿಟೈಜ್ ಮಾಡಿ ಟಿಫಿನ್ ಬಾಕ್ಸ್‌ಗಳ ನೈರ್ಮಲ್ಯವನ್ನೂ ಕಾಪಾಡುತ್ತದೆ.
ಆರೋಗ್ಯಕರ ಟಿಫಿನ್ ರೆಸಿಪಿ ಸ್ಪರ್ಧೆಯಲ್ಲಿ ಇತ್ತೀಚೆಗೆ ವಿಜೇತರಾದವರಲ್ಲಿ ಒಬ್ಬರಾದ ಬೆಂಗಳೂರಿನ ಕನ್ನಡದವರಾದ ಅಶ್ವಿನಿ ಶಂಕರ್, ಆಕೆಯ ವಿಜೇತ ಪಾಕವಿಧಾನ, ಹಬೆ ಉಂಡೆಗಳು (ಸ್ಪೈಸ್ ಬಾಲ್ಸ್), ಆರೋಗ್ಯಕರ ಮತ್ತು ರುಚಿಕರವಾದ ಊಟದ ಸಾರವನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತದೆ.
ಹಬೆ ಉಂಡೆಗಳು (ಸ್ಪೈಸ್ ಬಾಲ್ಸ್) ಪಾಕವಿಧಾನ :
ಬೇಕಾಗುವ ಸಾಮಗ್ರಿ:
ಅಕ್ಕಿ ಹಿಟ್ಟು 1 ಬಟ್ಟಲು, ನೀರು 2 ಬಟ್ಟಲು, ಎಣ್ಣೆ 2 ಚಮಚ, ಉಪ್ಪು, ಎಳ್ಳು 4 ಚಮಚ, ತುಪ್ಪ 2 ಚಮಚ, ಚಟ್ಟಿಪುಡಿ.
ಮಾಡುವ ವಿಧಾನ:
ಹುರಿದ ಶೇಂಗಾ ಬೀಜ 1 ಬಟ್ಟಲು, ಖಾರದ ಪುಡಿ 1 ಚಮಚ, ಜೀರಿಗೆ 1 ಚಮಚ, ಉಪ್ಪು, ಬೆಲ್ಲದ ಪುಡಿ 2 ಚಮಚ, ಕೊಬ್ಬರಿ ತುರಿ 2 ಚಮಚ, ಎಲ್ಲವನ್ನೂ ಸೇರಿಸಿ ತರಿ ತರಿಯಾಗಿ ಪುಡಿ ಮಾಡಿ ಕೊಳ್ಳಿ. ಪಾತ್ರೆಗೆ ನೀರು, ಉಪ್ಪು, ಎಣ್ಣೆ ಹಾಕಿ ಕುದಿಯಲು ಬಂದಾಗ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ, ಆರಿದ ನಂತರ ನಾದಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಕುಕ್ಕರಿನಲ್ಲಿ ಐದು ನಿಮಿಷ ಹಬೆಯಲ್ಲಿ ಬೇಯಿಸಿ. ಬಾಣಲೆಗೆ ತುಪ್ಪ, ಎಳ್ಳು ಹಾಕಿ ಪರಿಮಳ ಬರುವವರೆಗೂ ಹುರಿದು, ಬೆಂದ ಉಂಡೆಗಳನ್ನು ಮತ್ತು ಚಟ್ಟಿಪುಡಿ ಹಾಕಿ ಚೆನ್ನಾಗಿ ಬೆರೆಸಿ ಸವಿಯಿರಿ.
Disclaimer:
ಹಕ್ಕು ನಿರಾಕರಣೆ - ಸ್ಪರ್ಧೆಯನ್ನು ದಿ ಪ್ರಿಂಟರ್ಸ್ ಮೈಸೂರು (ಪಿ) ಅಮಿಟೆಡ್ (ಐಪಿಎಂಎಲ್) ಮಾತ್ರ ನಡೆಸುತ್ತದೆ ಮತ್ತು ಬಹುಮಾನಗಳ ವಿತರಣೆಯನ್ನು ಟಿಪಿಎಂಎಲ್‌ನ ಸ್ವಂತ ವಿವೇಚನೆಯಿಂದ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಐಪಿಎಂಎಲ್ ನಿರ್ಧಾರವೇ ಅಂತಿಮವಾಗಿರುತ್ತದೆ. ಆದ್ದರಿಂದ, ಯಾವುದೇ ರೀತಿಯಲ್ಲಿ ಸ್ಪರ್ಧೆ/ಬಹುಮಾನಗಳಿಗೆ ಸಂಬಂಧಿಸಿದಂತೆ ಕಂಪನಿಗೆ ಯಾವುದೇ ಸಂವಹನ/ಹಕ್ಕುಗಳನ್ನು ನೀಡಲಾಗುವುದಿಲ್ಲ. ಐಪಿಎಂಎಲ್‌ನ ಯಾವುದೇ ಕಾರ್ಯಗಳು/ಲೋಪಗಳಿಗೆ ಕಂಪನಿಯು ಜವಾಬ್ದಾರನಾಗಿರುವುದಿಲ್ಲ. Exo ರೌಂಡ್ 500g ಜೊತೆಗೆ Exo ಸೂಪರ್ ಸ್ಮಬರ್‌ನ 1 ಯೂನಿಟ್ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.