ADVERTISEMENT

ದೇಶಿ ಭಾಷೆಗಳಿಗೆ ಟೈಪಿಂಗ್‌ ತಂತ್ರಾಂಶ

ಪೃಥ್ವಿರಾಜ್ ಎಂ ಎಚ್
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ದೇಶಿ ಭಾಷೆಗಳಿಗೆ ಟೈಪಿಂಗ್‌ ತಂತ್ರಾಂಶ
ದೇಶಿ ಭಾಷೆಗಳಿಗೆ ಟೈಪಿಂಗ್‌ ತಂತ್ರಾಂಶ   

ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಬಹುತೇಕ ವ್ಯವಹಾರಗಳು ಮೊಬೈಲ್‌ ಫೋನ್‌ನಲ್ಲೇ ನಡೆಯುತ್ತಿವೆ. ದೇಶದಲ್ಲಿ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರಗಳು ಆನ್‌ಲೈನ್‌ ವಹಿವಾಟು, ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ಅಲ್ಲದೆ ಯೋಜನೆ, ಸೇವೆಗಳ ಮಾಹಿತಿ ತಿಳಿಸಲು ಮೊಬೈಲ್‌ ಫೋನ್‌ಗಳನ್ನೇ ಮಾಧ್ಯಮವಾಗಿ ಬಳಸಿಕೊಳ್ಳುತ್ತಿವೆ.

ಆದರೆ, ಮೊಬೈಲ್‌ ಫೋನ್‌ನಲ್ಲಿ ಇಂಗ್ಲಿಷ್‌ ಭಾಷೆಯ ಜತೆಗೆ ಸ್ಥಳೀಯ ಭಾಷೆಗಳೂ ಇದ್ದರೆ ವ್ಯವಹಾರ, ಸಂವಹನ ಮತ್ತಷ್ಟು ಪರಿಣಾಮಕಾರಿಯಾಗಿ ಆಗುತ್ತದೆ.
ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ರೆವರಿ ಲ್ಯಾಂಗ್ವೇಜ್‌ ಟೆಕ್ನಾಲಜೀಸ್ ಸಂಸ್ಯುಥೆ ‘ಸ್ವಲೇಖ್‌’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಇದು 22 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಭಾರತದಲ್ಲಿ ತಯಾರಾಗುತ್ತಿರುವ ಬಹುತೇಕ ಫೀಚರ್‌ ಫೋನ್‌ಗಳಲ್ಲಿ ಈ ತಂತ್ರಾಂಶವೇ ಡೀಫಾಲ್ಟ್‌ ಆಗಿ ಬರುತ್ತದೆ. ಪ್ಲೇಸ್ಟೋರ್‌ನಲ್ಲೂ ಲಭ್ಯವಿದೆ. ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ADVERTISEMENT

5.9 ಎಂ.ಬಿ ಗಾತ್ರದ ಈ ತಂತ್ರಾಂಶವನ್ನು ಅಳವಡಿಸಿಕೊಳ್ಳುವುದೂ ಸುಲಭ. 3ಜಿ ಅಂತರ್ಜಾಲ ಸಂಪರ್ಕದಲ್ಲೂ ಒಂದು ನಿಮಿಷದಲ್ಲಿ ಡೌನ್‌ಲೋಡ್‌ ಆಗುತ್ತದೆ. ಇಂಟೆಕ್ಸ್‌, ಕಾರ್ಬನ್‌, ಕ್ವಾಲಕಂ, ಜೆನ್‌ಮೊಬೈಲ್‌, ಮೈಕ್ರೊಮ್ಯಾಕ್ಸ್, ಜಿಯೋಕ್ಸ್, ಜಿವೋನಿ ಮೊಬೈಲ್‌ ಫೋನ್‌ಗಳಲ್ಲೂ ಸ್ವಲೇಖ್‌ ಕೀಬೋರ್ಡ್ ಲಭ್ಯವಿದೆ.

ತಂತ್ರಾಂಶದ ವೈಶಿಷ್ಟ್ಯ
* ಕ್ವಾರ್ಟಿ ಕೀಪ್ಯಾಡ್‌ ರೀತಿಯಲ್ಲಿ ಇದು ಕೂಡ ನಾಲ್ಕು ಸಾಲಿನ ಕೀಪ್ಯಾಡ್‌ ವ್ಯಾಕರಣ ದೋಷ ಸಮಸ್ಯೆ ಕಾಡದಂತೆ ಆಟೊ ಕ್ಯಾಪಿಟಲೈಸೇಷನ್‌ ತಂತ್ರಜ್ಞಾನ ಅಳವಡಿಸಲಾಗಿದೆ

* ಇಂಗ್ಲಿಷ್‌ನಲ್ಲಿ ಟೈಪ್‌ ಮಾಡಿದರೂ ಕನ್ನಡ ಭಾಷೆಗೆ ಭಾಷಾಂತರವಾಗುತ್ತದೆ. ಉದಾಹರಣೆಗೆ RAMA ಎಂದು ಟೈಪ್‌ ಮಾಡಿದರೆ ಕನ್ನಡದಲ್ಲಿ ‘ರಾಮ’ ಎಂದು ಪರದೆ ಮೇಲೆ ಮೂಡುತ್ತದೆ

* ತೆಲುಗು, ತಮಿಳು ಇತ್ಯಾದಿ ಭಾರತೀಯ ಭಾಷೆಗಳು ಗೊತ್ತಿದ್ದರೆ ಕೀಪ್ಯಾಡ್‌ ಅನ್ನು ಬದಲಿಸಿಕೊಂಡು ಇಂಗ್ಲಿಷ್‌ನಲ್ಲಿ ಟೈಪ್‌ಮಾಡಿದರೂ ಆಯಾ ಭಾಷೆಯ ಲಿಪಿಯಲ್ಲೇ ಅಕ್ಷರಗಳು ಮೂಡುತ್ತವೆ

* ಕ್ವಾಲ್‌ಕಾಂ ಚಿಪ್‌ಸೆಟ್‌ ಇರುವ ಎಲ್ಲ ಮೊಬೈಲ್‌ಗಳಲ್ಲಿ ಲಭ್ಯವಿದೆ ಫೋನೆಟಿಕ್‌ ಮೋಡ್‌, ನೇಟಿವ್‌ ಮೋಡ್‌ ಕೀಪ್ಯಾಡ್‌ಗಳಲ್ಲೂ ಇದನ್ನು ಬಳಸಬಹುದು

* ಚಿಕ್ಕ ಗಾತ್ರದ ಪರದೆ ಇರುವ ಮೊಬೈಲ್‌ ಫೋನ್‌ಗಳಲ್ಲೂ ಸ್ಪಷ್ಟವಾಗಿ ಅಕ್ಷರಗಳು ಮೂಡುತ್ತವೆ.

* 512ಕೆಬಿ ಗಾತ್ರದ ರ‍್ಯಾಮ್‌ ಹೊಂದಿರುವ ಮೊಬೈಲ್‌ಗಳಲ್ಲೂ ಬಳಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.