ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು (ರೆಪೊ) ಹೆಚ್ಚಿಸಿದ ಬೆನ್ನಲ್ಲೇ ಕೆಲ ಬ್ಯಾಂಕ್‌ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಏರಿಸಿವೆ.
ಇದರಿಂದಾಗಿ ಗೃಹ, ವಾಹನ ಮತ್ತು ಉದ್ದಿಮೆ ಸಾಲಗಳ ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತ ಹೆಚ್ಚಳಗೊಳ್ಳಲಿದೆ.
ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್) ಬಡ್ಡಿ ದರವನ್ನು ಆರ್‌ಬಿಐನ ನಿರ್ಧಾರಕ್ಕೂ ಮುನ್ನವೇ ಹೆಚ್ಚಿಸಿವೆ. ಈ ದೊಡ್ಡ ಬ್ಯಾಂಕ್‌ಗಳ ಸಾಲಿಗೆ ಈಗ ಇಂಡಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್ ಸೇರಿವೆ.
ವಿವಿಧ ಅವಧಿಯ ಸಾಲಗಳಿಗೆ ಸಂಬಂಧಿಸಿದಂತೆ ‘ಎಂಸಿಎಲ್‌ಆರ್’ ಅನ್ನು ಶೇ 0.10ರಷ್ಟು ಹೆಚ್ಚಿಸಲಾಗಿದೆ. ಬಡ್ಡಿ ದರ ಹೆಚ್ಚಿಸುವುದಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಇಂಗಿತ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.