ADVERTISEMENT

ಲಾಭ ಗಳಿಕೆ: ಸೂಚ್ಯಂಕ ಅಲ್ಪ ಏರಿಕೆ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಲಾಭ ಗಳಿಕೆಯ ಉದ್ದೇಶದ ವಹಿವಾಟು ನಡೆದಿದ್ದರಿಂದ ಸೂಚ್ಯಂಕಗಳು ಅಲ್ಪ ಏರಿಕೆಯನ್ನಷ್ಟೇ ಕಂಡವು.‌

ಕಚ್ಚಾ ತೈಲ ದರ ಏರಿಕೆ ಮತ್ತು ಜಾಗತಿಕ ರಾಜಕೀಯ ವಿದ್ಯಮಾನಗಳು ದೇಶದ ಷೇರುಪೇಟೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 8 ಅಂಶಗಳಷ್ಟು ಅಲ್ಪ ಏರಿಕೆ ಕಂಡು 35,216 ಅಂಶಗಳಿಗೆ ತಲುಪಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವು (ಎನ್‌ಎಸ್‌ಇ) ನಿಫ್ಟಿ 2 ಅಂಶ ಹೆಚ್ಚಾಗಿ 10,717 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಐಸಿಐಸಿಐ ಬ್ಯಾಂಕ್‌ ಶೇ 7 ರಷ್ಟು ಗಳಿಕೆ ಕಂಡು ದಿನದ ವಹಿವಾಟಿನಲ್ಲಿ ಉತ್ತಮ ಪ್ರದರ್ಶನ ನೀಡಿತು. ಬ್ಯಾಂಕ್‌ ಸೋಮವಾರ ಪ್ರಕಟಿಸಿದ ತ್ರೈಮಾಸಿಕ ಫಲಿತಾಂಶದಲ್ಲಿ ವಸೂಲಿಯಾಗದ ಸಾಲ ಹೆಚ್ಚಾಗಿರುವುದರಿಂದ ನಿವ್ವಳ ಲಾಭ ಶೇ 45 ರಷ್ಟು ಇಳಿಕೆ ಕಂಡಿದೆ.

ಬಂಡವಾಳ ಹೂಡಿಕೆ: ದೇಶಿ ಸಾಂಸ್ಥಿಕ ಹೂಡಿಕೆದಾರರು ವಹಿವಾಟಿನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಸೋಮವಾರ ₹ 1,037 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ. ಆದರೆ, ವಿದೇಶಿ ಹೂಡಿಕೆದಾರರು ಮಾರಾಟಕ್ಕೆ ಗಮನ ನೀಡಿದ್ದು, ಸೋಮವಾರ ₹ 635 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

‘ರೂಪಾಯಿ ಬೆಲೆ ಕುಸಿತ, ಮತ್ತು ತೈಲ ಬೆಲೆ ಏರಿಕೆ ಬಗ್ಗೆ ಹೂಡಿಕೆದಾರರು ಆತಂಕ ಗೊಂಡಿದ್ದರಿಂದ ಚಂಚಲ ವಹಿವಾಟು ನಡೆಯಿತು.’
– ವಿನೋದ್‌ ನಾಯರ್‌, ಸಂಶೋಧನಾ ಮುಖ್ಯಸ್ಥ, ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.