ನವದೆಹಲಿ (ಪಿಟಿಐ): ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆ ಇನ್ಫೊಸಿಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಆರ್. ಶೇಷಸಾಯಿ ನೇಮಕಗೊಂಡಿದ್ದಾರೆ.
ಇನ್ಫೊಸಿಸ್‌ನ ನಿರ್ದೇಶಕ ಮಂಡಳಿ ಅಧ್ಯಕ್ಷ ಮತ್ತು ಸ್ವತಂತ್ರ ನಿರ್ದೇಶಕರಾಗಿದ್ದ ಕೆ.ವಿ ಕಾಮತ್ ಅವರು ಬ್ರಿಕ್ ಬ್ಯಾಂಕ್ ಅಧ್ಯಕ್ಷರಾಗಿ ನೇಮಗೊಂಡಿದ್ದು, ಶೀಘ್ರದಲ್ಲೇ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಅವರ ಸ್ಥಾನವನ್ನು ಶೇಷಸಾಯಿ ತುಂಬಲಿದ್ದಾರೆ ಎಂದು ಇನ್ಫೊಸಿಸ್ ಪ್ರಕಟಣೆ ತಿಳಿಸಿದೆ.
ಶೇಷಸಾಯಿ ಅವರು 2011ರಿಂದ ಇನ್ಫೊಸಿಸ್‌ನ ನಿರ್ದೇಶಕ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿದ್ದರು. ಲೆಕ್ಕಪತ್ರ ಪರಿಶೋಧನಾ ಸಮಿತಿಯ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಅಶೋಕ್ ಲೇಲ್ಯಾಂಡ್ ಕಂಪೆನಿಯ ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರಾಗಿಯೂ ಶೇಷಸಾಯಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.