ADVERTISEMENT

ಷೇರುಪೇಟೆಗೆ 2ತಿಂಗಳಲ್ಲೇ ಕೆಟ್ಟ ವಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2015, 19:30 IST
Last Updated 6 ಫೆಬ್ರುವರಿ 2015, 19:30 IST

ಮುಂಬೈ(ಪಿಟಿಐ): ದೇಶದ ಷೇರು­ಪೇಟೆಗೆ ಈ ವಾರವಿಡೀ ಇಳಿಜಾರಿನ ಪಯಣವೇ ಆಗಿತ್ತು.   ಇದು ಹೂಡಿಕೆ ದಾರರ ಪಾಲಿಗೆ ಕಳೆದೆರಡು ತಿಂಗಳ ಲ್ಲಿಯೇ ಬಲು ನಷ್ಟದ ವಾರ ಎನಿಸಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ, ಶುಕ್ರವಾರವೂ 133 ಅಂಶಗಳ ನಷ್ಟ ಅನುಭವಿಸಿ 28,717.91 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಈ ವಾರದ ಐದು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಒಟ್ಟು 465 ಅಂಶಗಳ ನಷ್ಟ ಕಂಡಿದೆ.
ಜ. 30ರ ಶುಕ್ರವಾರದಿಂದ ಆರಂಭಿಸಿ ಆರು ವಹಿವಾಟುಗಳಲ್ಲಿ ಸೂಚ್ಯಂಕ ನಿರಂತರವಾಗಿ ಪತನ ಕಂಡಿದ್ದು, ಒಟ್ಟಾರೆಯಾಗಿ 963.86 ಅಂಶಗಳ ಹಾನಿ ಅನುಭವಿಸಿದೆ.

ಬ್ಲ್ಯೂಚಿಪ್‌ ಕಂಪೆನಿಗಳ 3ನೇ ತ್ರೈಮಾಸಿಕ ಫಲಿತಾಂಶ ನಿರಾಶಾ­ದಾಯಕವಾಗಿದ್ದುದು ಮತ್ತು ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಕುರಿತು ಮೂಡಿರುವ ಅಸ್ಥಿರತೆಯ ಭಾವ ಹಾಗೂ ವಿದೇಶಿ ಹೂಡಿಕೆದಾರರು ಬಂಡವಾಳವನ್ನು ಮಾರುಕಟ್ಟೆಯಿಂದ ವಾಪಸ್‌ ತೆಗೆದು­ಕೊಳ್ಳುವ ಪ್ರಮಾಣ ಹೆಚ್ಚಿರುವುದು ಸೇರಿದಂತೆ ಹಲವು ಅಂಶಗಳು ಶುಕ್ರವಾರದ ಷೇರುಪೇಟೆ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ ಎಂದು ಷೇರು ದಲ್ಲಾಳಿಗಳು ವಿಶ್ಲೇಷಿಸಿದ್ದಾರೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ನಿಫ್ಟಿಯೂ 50.65 ಅಂಶಗಳ ನಷ್ಟ ಕಂಡು, 8,661.05 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಮುಖ್ಯವಾಗಿ ವಾಹನ ಉದ್ಯಮ, ಆರೋಗ್ಯ ರಕ್ಷಣೆ, ಬ್ಯಾಂಕಿಂಗ್‌, ವಿದ್ಯುತ್‌, ಗ್ರಾಹಕ ಬಳಕೆ ವಸ್ತುಗಳು ಹಾಗೂ ಅನಿಲ ಮತ್ತು ತೈಲ ವಿಭಾಗದ ಕಂಪೆನಿಗಳ ಷೇರುಗಳು ಮೌಲ್ಯ ಕಳೆದುಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.