ADVERTISEMENT

ಸನ್ ಫಾರ್ಮಾದಿಂದ ಡೈಚಿ ನಿರ್ಗಮನ

ರೂ2,420 ಕೋಟಿಗೆ ಎಲ್ಲಾ ಷೇರು ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2015, 19:30 IST
Last Updated 21 ಏಪ್ರಿಲ್ 2015, 19:30 IST

ನವದೆಹಲಿ (ಪಿಟಿಐ): ಜಪಾನ್‌ ಮೂಲದ ಔಷಧ ತಯಾರಿಕಾ ಕಂಪೆನಿ ಡೈಚಿ ಸ್ಯಾಂಕ್ಯೊ, ತಾನು ಸನ್‌ ಫಾರ್ಮಾದಲ್ಲಿ ಹೊಂದಿದ್ದ ಎಲ್ಲಾ ಷೇರುಗಳನ್ನೂ ಮಾರಾಟ ಮಾಡಿದೆ.

ಪ್ರತಿ ಷೇರಿಗೆ ರೂ950ರಂತೆ ಒಟ್ಟು 21 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ರೂ2,420 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಸನ್‌ ಫಾರ್ಮಾದಲ್ಲಿದ್ದ ತನ್ನೆಲ್ಲಾ ಷೇರುಪಾಲನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿನ ತನ್ನ ಏಳು ವರ್ಷಗಳ ಉದ್ಯಮ ವಹಿವಾಟನ್ನು ಅಂತ್ಯಗೊಳಿಸಿದೆ.

ರ್‍ಯಾನ್‌ಬಕ್ಸಿಯನ್ನು ರೂ25 ಸಾವಿರ ಕೋಟಿಗಳಿಗೆ ಖರೀದಿ ಮಾಡಿರುವುದಾಗಿ ಸನ್‌ಫಾರ್ಮಾ ಕಂಪೆನಿ ಕಳೆದ ತಿಂಗಳು ಪ್ರಕಟಣೆಯಲ್ಲಿ ತಿಳಿಸಿತ್ತು.

ಹಿನ್ನೆಲೆ: 2008ರಲ್ಲಿ ರೂ22 ಸಾವಿರ ಕೋಟಿಗೆ ರ್‍ಯಾನ್‌ಬಕ್ಸಿ ಲ್ಯಾಬೊರೇಟರೀಸ್‌ ಖರೀದಿ ಮಾಡುವ ಮೂಲಕ ಡೈಚಿ ಸ್ಯಾಂಕ್ಯೊ ಕಂಪೆನಿ ಭಾರತದಲ್ಲಿ ಅಗ ತಾನೇ ಅಭಿವೃದ್ಧಿ ಕಾಣುತ್ತಿದ್ದ ಔಷಧ ಉತ್ಪನ್ನಗಳ ತಯಾರಿಕಾ ಕ್ಷೇತ್ರಕ್ಕೆ ಕಾಲಿ ಟ್ಟಿತು. ಆದರೆ, ಅದೇ ವರ್ಷ ತಯಾರಿಕಾ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಂತೆ ಅಮೆರಿಕದ ಆಹಾರ ಮತ್ತು ಔಷಧ ಮಂಡಳಿಯಿಂದ ಕಾನೂನು ಕ್ರಮ ಎದುರಿಸಬೇಕಾಯಿತು.

ಔಷಧ ವಸ್ತುಗಳು ಗುಣಮಟ್ಟ ದಿಂದಾಗಿ ರ್‍ಯಾನ್‌ಬಕ್ಸಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ಕಂಪೆನಿಯು 50ಕ್ಕೂ ಹೆಚ್ಚಿನ ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಜಗತ್ತಿನಾದ್ಯಂತ ಒಟ್ಟು 30 ಸಾವಿರ ಉದ್ಯೋಗಿಗಳನ್ನು ಹೊಂದಿದೆ.

ಅಂಕಿ–ಅಂಶ
ರೂ21 ಕೋಟಿ ಸನ್‌ ಫಾರ್ಮಾದಲ್ಲಿದ್ದ ಷೇರುಗಳ ಮಾರಾಟ
ರೂ2,420 ಕೋಟಿ ಬಂಡವಾಳ ಸಂಗ್ರಹಿಸಿದ ಡೈಚಿ ಸ್ಯಾಂಕ್ಯೊ  ಕಂಪೆನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.