ADVERTISEMENT

28ಸಾವಿರ ಗಡಿದಾಟಿದ ಸೂಚ್ಯಂಕ

ಸತತ 4ನೇ ದಿನವೂ ಷೇರುಪೇಟೆಯಲ್ಲಿ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2014, 19:30 IST
Last Updated 5 ನವೆಂಬರ್ 2014, 19:30 IST

ಮುಂಬೈ(ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ದೇಶದ ಷೇರು ಪೇಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 28 ಸಾವಿರ ಅಂಶಗಳ ಗಡಿ ದಾಟಿತ್ತು. ಕೇಂದ್ರ ಸರ್ಕಾರ ಇನ್ನಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳ ಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಬಡ್ಡಿದರದಲ್ಲಿ ಕಡಿತ ಪ್ರಕಟಿಸಲಿದೆ ಎಂಬ ನಿರೀಕ್ಷೆಗಳು ಷೇರುಪೇಟೆಯಲ್ಲಿನ ಚಟುವಟಿಕೆಗೆ ಉತ್ತೇಜನವನ್ನುಂಟು ಮಾಡಿವೆ.

ಇದೇ ವೇಳೆ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ಕಾರ್ಮಿಕ ಕಾಯ್ದೆ, ಭೂ ಸ್ವಾಧೀನ ಕಾಯ್ದೆ ಹಾಗೂ ವಿಮಾ ಕಾಯ್ದೆಯಲ್ಲಿ ಬದಲಾವಣೆ ಹಾಗೂ ನಷ್ಟದಲ್ಲಿರುವ ಸರ್ಕಾರಿ ಉದ್ಯಮ ಸಂಸ್ಥೆಗಳನ್ನು ಖಾಸ ಗೀಕರಣಗೊಳಿಸುವ ಉದ್ದೇಶವಿದೆ ಎಂದು ಬುಧವಾರ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ್ದು  ಷೇರುಪೇಟೆಯಲ್ಲಿನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತು.

28,010 ಅಂಶ ಗರಿಷ್ಠ
ಬಿಎಸ್‌ಇ ಸಂವೇದಿ ಸೂಚ್ಯಂಕ ಬುಧ ವಾರದ ವಹಿವಾಟಿನಲ್ಲಿ 55.50 ಅಂಶ ಗಳಷ್ಟು ಹೆಚ್ಚಳ ಸಾಧಿಸಿ 27,915.88 ಅಂಶಗಳಲ್ಲಿ ಅಂತ್ಯ ಹಾಡಿತು. ದಿನದ ವಹಿವಾಟಿನ ಒಂದು ಹಂತದಲ್ಲಿ 28,010.39 ಅಂಶಗಳ ಗರಿಷ್ಠ ಮಟ್ಟಕ್ಕೂ ಏರಿತ್ತು. 

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ನಿಫ್ಟಿಯೂ 14.15 ಅಂಶಗಳಷ್ಟು ಶಕ್ತಿ ಹೆಚ್ಚಿಸಿ ಕೊಂಡು ಸಾರ್ವಕಾಲಿಕ ಗರಿಷ್ಠ ಮಟ್ಟ ವಾದ 8,338.30 ಅಂಶಗಳಿಗೇರಿತು.ಕಳೆದ ನಾಲ್ಕು ದಿನಗಳಿಂದಲೂ ಷೇರುಪೇ ಟೆಯ ವಹಿವಾಟು ಚುರುಕಿನಿಂದ ಸಾಗಿದ್ದು, ಸೂಚ್ಯಂಕ ಸತತ ಏರುಮುಖವಾಗಿಯೇ ಇದೆ.

ಜುವಾರಿ ಷೇರು ಏರಿಕೆ
ಈ ಮಧ್ಯೆ ಷೇರುಪೇಟೆಯ ಬುಧ ವಾರದ ವಹಿವಾಟಿನಲ್ಲಿ ರಾಸಾಯನಿಕ ಗೊಬ್ಬರ ವಿಭಾಗದ ಷೇರುಗಳು ಭಾರಿ ಪ್ರಮಾಣದಲ್ಲಿ ಮೌಲ್ಯ ಹೆಚ್ಚಿಸಿ ಕೊಂಡವು. ಬಿಎಸ್‌ಇಯಲ್ಲಿ ಜುವಾರಿ ಆಗ್ರೊ ಷೇರು ಶೇ 19.83ರಷ್ಟು, ರಾಷ್ಟ್ರೀಯ ಕೆಮಿಕಲ್ಸ್  ಆ್ಯಂಡ್‌ ಫರ್ಟಿಲೈಸರ್ಸ್‌  ಷೇರು ಶೇ 10.78ರಷ್ಟು, ನ್ಯಾಷನಲ್‌ ಫರ್ಟಿಲೈಸರ್ಸ್‌ ಷೇರು ಶೇ 8.03ರಷ್ಟು ಬೆಲೆ ಹೆಚ್ಚಿಸಿಕೊಂಡವು.

ದೇಶದಲ್ಲಿ ಹೊಸದಾಗಿ ಯೂರಿಯಾ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಹೊಸದಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲು ಪ್ರಕಟಣೆ ಹೊರಡಿಸಿರುವುದೇ ರಾಸಾಯನಿಕ ಗೊಬ್ಬರ ವಿಭಾಗದ ಷೇರುಗಳ ಮೌಲ್ಯ ಹೆಚ್ಚಲು ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.